ಅತಿವೃಷ್ಠಿ ಪ್ರದೇಶಗಳ ವೀಕ್ಷಣೆಗೆಂದು ತೆರಳಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೊರನಾಡು ಹೆಬ್ಬಾಳೆ ಸೇತುವೆ ಮುಳುಗಡೆ ಹಿನ್ನಲೆಯಲ್ಲಿ ವಾಪಾಸ್ಸಾಗಿದ್ದಾರೆ.

ಕಳಸ ತಾಲ್ಲೂಕಿನ ಕವನಳ್ಳ ಗ್ರಾಮದಲ್ಲಿ ತೀವ್ರ ಮಳೆಯ ಹಿನ್ನಲೆಯಲ್ಲಿ ಮನೆಯೊಂದು ಕುಸಿತಗೊಂಡಿತ್ತು.ಅಲ್ಲದೆ ರಸ್ತೆಗಳು ಕಡಿತಗೊಂಡಿತ್ತು.ಇದರ ವೀಕ್ಷಣೆಗೆಂದು ಕವನಳ್ಳಕ್ಕೆ ಪ್ರಯಾಣ ಬೆಳೆಸಿದ್ದರು.ಆದರೆ ಹೆಬ್ಬಾಳೆ ಸೇತುವೆ ಬಳಿ ಹೋದಾಗ ಸೇತುವೆ ಮುಳುಗಡೆಗೊಂಡಿತ್ತು.

ಕೆಲ ಕಾಲ ಸೇತುವೆ ಬಳಿ ಕಾದ ಶಾಸಕರು ನೀರು ಇಳಿಕೆಯಾಗದ ಹಿನ್ನಲೆಯಲ್ಲಿ ಪ್ರಯಾಣ ಮೊಟಕುಗೊಳಿಸಿ ವಾಪಾಸ್ಸಾದರು.

ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೆಬ್ಬಾಳೆ ಸೇತುವೆ ಪ್ರತೀವರ್ಷ ಮಳೆಗಾಲದಲ್ಲಿ ಮುಳುಗಡೆಗೊಂಡು ಸಾಕಷ್ಟು ತೊಂದರೆ ಆಗುತ್ತಿದೆ. ಈ ಬಾರಿ ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ 15ಕೋಟಿ 60 ಲಕ್ಷಕ್ಕೆ ಟೆಂಡರ್ ಆಗಿದೆ.ಮುಂದಿನ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗೋದಿಲ್ಲ ಎಂದು ಹೇಳಿದರು.

