ಕ್ರೈಸ್ತರ ಮಾತೆಯಾಗಿ ಕ್ರೈಸ್ತ ಸಮುದಾಯದದಲ್ಲಿ ಗೌರವಿತ ಸ್ಥಾನ ಪಡೆದಿರುವ ಮೇರಿ ಮಾತೆ ಜಯಂತಿ ಹಬ್ಬವನ್ನು ಕಳಸ ತಾಲ್ಲೂಕಿನಾಧ್ಯಂತ ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಗುರುವಾರ ಬೆಳಿಗ್ಗೆ ಕಳಸ, ಸಂಸೆ, ಹಿರೇಬೈಲು ಚರ್ಚುಗಳಲ್ಲಿ ವಿಶೇಷ ಬಲಿ ಪೂಜೆ ನಡೆಸಲಾಯಿತು. ನಂತರ ಹೊಸತೆನೆಯನ್ನು ಪೂಜಿಸಿ ಚರ್ಚ್ ಧರ್ಮ ಗುರುಗಳು ಆಶೀರ್ವದಿಸಿ ಪ್ರತಿಯೊಂದು ಕುಟುಂಬಗಳಿಗೂ ವಿತರಿಸಿದರು.

ಮನೆ ಮನೆಗಳಲ್ಲಿ ವಿವಿಧ ಬಗೆಯ ತರಕಾರಿಗಳ ಪಲ್ಯ ಮತ್ತು ಪದಾರ್ಥ ಮತ್ತು ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ ಚರ್ಚ್ನಲ್ಲಿ ನೀಡಿರುವ ಹೊಸತೆನೆಯ ಅಕ್ಕಿಯಿಂದ ಮಾಡಿರುವ ಊಟವನ್ನು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಸೇವಿಸಿ ಮೇರಿ ಮಾತೆಯ ಜಯಂತಿಯನ್ನು ಆಚರಿಸಿದರು.

