ಕಳಸದ ಕೆಪಿಎಸ್ ಪ್ರೌಢ ಶಾಲೆಗೆ ಕಳಸದ ಹಂದಿಗೋಡು ಪುಟ್ಟದೇವರಯ್ಯ ಹಾಗೂ ನಾಗಮ್ಮನವರ ಸ್ಮರಣಾರ್ಥ ಅವರ ಮಕ್ಕಳು 9 ಅಲ್ಮೇರಾಗಳನ್ನು ಕೊಡುಗೆ ನೀಡಿದ್ದಾರೆ.
ಶಾಲೆಯ ಪ್ರತಿ ತರಗತಿಗೆ ಒಂದರಂತೆ ಒಟ್ಟು 65,700ರೂ ಬೆಲೆ ಬಾಳುವ 9 ಅಲ್ಮೇರಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಕೊಡುಗೆ ಸ್ವೀಕರಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
