ಕಳಸ ಲೈವ್ ವರದಿ
ಇಲ್ಲಿನ ಸವಿತಾ ಭಂಡಾರಿ ಸಮಾಜವು ಕ್ಷೌರಿಕ ವೃತ್ತಿ ಮಾಡುವ ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ 10 ಲಕ್ಷ ಮಂದಿ ಕ್ಷೌರಿಕ ವೃತ್ತಿಯವರು ಇದ್ದಾರೆ. ನಮ್ಮನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ.ಆದರೆ ಆ ವರ್ಗದಲ್ಲಿ ಪ್ರಬಲ ಸಮುದಾಯದವರು ಕೂಡ ಇರುವುದರಿಂದ ಉದ್ಯೋಗ ಮತ್ತು ಇತರೆ ಮೀಸಲಾತಿ ಸಿಗದೆ ಪರಿತಪಿಸುವಂತಾಗಿದೆ.ಆದ್ದರಿಂದ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ನಮ್ಮನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಿ ಸರ್ಕಾರದ ಸೌಲಭ್ಯಗಳನ್ನು ನೀಡಬೇಕು. ಬಂಡವಾಳಶಾಹಿಗಳು ಮತ್ತು ಉತ್ತರ ಭಾರತದ ಅನ್ಯ ಧರ್ಮೀಯರಿಂದ ಕ್ಷೌರಿಕ ವೃತ್ತಿಗೆ ರಕ್ಷಣೆ ನೀಡಬೇಕು.ಕ್ಷೌರಿಕ ವೃತ್ತಿಯನ್ನು ಹೀಯಾಳಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಅಂಶಗಳಿದ್ದ ಮನವಿಯನ್ನು ತಹಶೀಲ್ದಾರ್ ನಂದ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸವಿತಾ ಭಂಡಾರಿ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ,ಕಾರ್ಯದರ್ಶಿ ರಾಘವೇಂದ್ರ ಭಂಡಾರಿ, ಪದಾಧಿಕಾರಿಗಳಾದ ವಿಜಯ್, ಅನಿಲ್, ಸಂತೋμï, ಕೃಷ್ಣ ಭಂಡಾರಿ, ಮಧು ಮತ್ತಿತರರು ಇದ್ದರು.

