ಕಳಸ ಲೈವ್ ವರದಿ
ಎಸ್.ಡಿ. ಎಂ ಕಾಲೇಜ್ ಮಂಗಳೂರು ಇಲ್ಲಿನ ೨೦೨೨-೨೩ ನೇ ಸಾಲಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿಯಾದ ಅರ್ಚಿತ್.ಎ.ಜೈನ್. ಸಂಸೆ ಇವರ ಮೊದಲ ಕವನ ಸಂಕಲನ ಭಾವನೆಗಳ ಬಯಲಿನಲ್ಲಿ ಪುಸ್ತಕವು ಬಿಡುಗಡೆಗೊಂಡಿತು.
ತುಳು ಚಲನಚಿತ್ರ ನಟರಾದ ರಾಹುಲ್ ಆಮಿನ್, ಕೆನರ ಕಾಲೇಜ್ ಪ್ರಾಂಶುಪಾಲರಾದ ಪ್ರೇಮಲತಾ, ಎಸ್.ಡಿ.ಎಂ ಕಾಲೇಜ್ ಪ್ರಾಂಶುಪಾಲರಾದ ಅರುಣಾ ಕಾಮತ್, ಮು೦ತಾದ ಗಣ್ಯರ ಮುಖಾಂತರ ಬಿಡುಗಡೆಯಾಯಿತು. ಅಧ್ಯಾಪಕರಾದ ದಿವ್ಯಾ, ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಯೋಜಕರಾದ ಜನ್ವಿ , ಅತಿಥಿ ಹಾಗೂ ರಿಯಾ ಉಪಸ್ಥಿತರಿದ್ದರು.
ಅರ್ಚಿತ್.ಎ.ಜೈನ್. ಸಂಸೆ ಇವರು ಕಳಸ ತಾಲ್ಲೂಕಿನ ಸಂಸೆಯವರಾಗಿದ್ದು, ಅಪೂರ್ವ ಕಾಫಿ ವರ್ಕ್ಸ್ ಸಂಸೆ ಇದರ ಮಾಲೀಕರಾದ ಡಿ ಅರವಿಂದ್ ಕುಮಾರ್ ಹಾಗೂ ಸರಳ ಜೈನ್ ಇವರ ಪುತ್ರ.
ಪುಸ್ತಕದ ಪ್ರತಿಗಳು ಲಭ್ಯವಿದ್ದು,ಆಸಕ್ತರು ಖರೀದಿಸಿ ಪ್ರೋತ್ಸಾಹಿಸುವಂತೆ ತಿಳಿಸಿದರು. ಅರ್ಚಿತ್.ಎ.ಜೈನ್. ಸಂಸೆ ೮೬೬೦೦೫೬೬೫೫
