ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಬಾಳೆಹೊಳೆ ಭದ್ರಸೈಟ್ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಕೊರಗಜ್ಜ ಕಾರ್ಣಿಕ ಕ್ಷೇತ್ರದಲ್ಲಿ ಮೇ 27 ಮತ್ತು 28 ರಂದು ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.
27 ಶನಿವಾರದಂದು ಮಧ್ಯಾಹ್ನ ಕೋಲ ಚಪ್ಪರ ಏರುವುದು, ಸಂಜೆ ಬಂಡಾರ ಇಳಿಯುವುದು.ರಾತ್ರಿ 10 ಗಂಟೆಗೆ ಬಬ್ಬುಸ್ವಾಮಿ ನೇಮೋತ್ಸವ ನಡೆಯಲಿದೆ.
28 ಭಾನುವಾರದಂದು ಮಧ್ಯಾಹ್ನ 12 ಗಂಟೆಗೆ ಚಾಮುಂಡೇಶ್ವರಿ, ಸ್ಥಳ ಗುಳಿಗ, ಕತ್ತಲಕಾನ ಗುಳಿಗ, ರಾಹು ದೈವಗಳ ಕೋಲ ನಡೆಯಲಿದೆ.ಸಂಜೆ 6 ಗಂಟೆಗೆ ಧೂಮಾವತಿ ಮತ್ತು ಬಂಟದೈವಗಳ ಕೋಲ.ಹಾಗೂ ಅದೇ ದಿನ ರಾತ್ರಿ 10 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.
