

ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಉಷಾವಿಶ್ವನಾಥ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎ.ರಂಗನಾಥ್ ಇವರನ್ನು ನೆಲ್ಲಿಕೆರೆ ಗ್ರಾಮಸ್ಥರು ಅಭಿನಂದಿಸಿದರು.
ಅಧ್ಯಕ್ಷೆ ಉಷಾವಿಶ್ವನಾಥ್ ನೆಲ್ಲಿಕೆರೆ ವಾಸಿಯಾಗಿದ್ದು, ಉಪಾಧ್ಯಕ್ಷ ರಂಗನಾಥ್ ಅದೇ ವಾರ್ಡ್ನಿಂದ ಚುನಾಯಿತರಾದವರು. ಈಗಾಗಿ ಅಧ್ಯಕ್ಷ ಉಪಾಧ್ಯಕ್ಷ ಇಬ್ಬರೂ ಒಂದೇ ವಾರ್ಡ್ನವರು ಆಗಿರುವುದರಿಂದ ನೆಲ್ಲಿಕೆರೆ ಗ್ರಾಮಸ್ಥರ ಸಂಭ್ರಮಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು.
ಗ್ರಾಮಸ್ಥರೆಲ್ಲ ಒಟ್ಟು ಸೇರಿ ಇಬ್ಬರನ್ನು ಗೌರವಿಸಿ ಸಂಭ್ರಮಿಸಿದರು.


