

ಕಳಸ ಲೈವ್ ವರದಿ
ಆಂದ್ರ ಪ್ರದೇಶದ ಪ್ರವಾಸೋಧ್ಯಮ ಸಚಿವೆ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ರೋಜಾ ತನ್ನ ಕುಟುಂಬಸ್ಥರ ಜೊತೆ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು.
ಬೆಳಿಗ್ಗೆ ಗಂಡ ಮತ್ತು ಮಗಳ ಜೊತೆ ಹೊರನಾಡಿಗೆ ಬೇಟಿ ನೀಡಿ ದೇವರ ದರ್ಶನ ಪಡೆದು, ದೇವರಿಗೆ ಅರ್ಚನೆ ಮಾಡಿಸಿ ನಂತರ ಪ್ರಸಾದ ಭೋಜನ ಸೇವಿಸಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು.


