

ಕಳಸ ಲೈವ್ ವರದಿ
ಕಳಸ ಸವಿತಾ ಭಂಡಾರಿ ಸಮಾಜ ಮತ್ತು ಯಶಸ್ವಿನಿ ಮಹಿಳಾ ಭಂಡಾರಿ ಸಮಾಜದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯಯನ್ನು ಸಮಾಜದ ಹಿರಿಯ ವ್ಯಕ್ತಿ ರಾಜು ಭಂಡಾರಿ ಮಾಡಿದ ನಂತರ ಭಂಡಾರಿ ಸಮುದಾಯದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಈ ಸಂದರ್ಭದಲ್ಲಿ ಕೌರಿಕ ವೃತ್ತಿ ನಡೆಸುತ್ತಿದ ಹಿರಿಯ ವ್ಯಕ್ತಿಯಾದ ರಾಜು ಭಂಡಾರಿ ಅವರನ್ನು ಗೌರವಿಸಲಾಯಿತು.ಮಹಿಳೆಯರಿಗೆ ಮತ್ತು ಪುರುಷರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ನಂತರ ಮನೆ ಮನೆಯಲ್ಲಿ ತಯಾರಿಸಿ ತಂದಿದ್ದ ಆಟಿ ಮಾಸದ ವಿಶೇಷ ಖಾಧ್ಯಗಳನ್ನು ಸವಿದರು.
ಈ ಸಂದರ್ಭದಲ್ಲಿ ಸಂಘದ ಭಂಡಾರಿ ಸಂಘದ ಅಧ್ಯಕ್ಷ ಮೋಹನ್ ಭಂಡಾರಿ, ಕಾರ್ಯದರ್ಶಿ ರಾಘವೇಂದ್ರ, ಮಹಿಳಾ ಸಂಘದ ಅಧ್ಯಕ್ಷೆ ವನಜಾ ಭಂಡಾರಿ, ಮುಖಂಡರಾದ ಜಗದೀಶ್ ಭಂಡಾರಿ, ರಾಘವೇಂದ್ರ ಭಂಡಾರಿ, ಕುಸುಮಾವತಿ ಇತರರು ಇದ್ದರು.


