
ಕಳಸ ಲೈವ್ ವರದಿ
ಜೆಸಿಐ ಭಾರತ ವಲಯ 14 ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವನ್ನು ಜೆಸಿಐ ಕಳಸದ ಆತಿಥ್ಯದಲ್ಲಿ ಕಳಸದ ಮಹಾವೀರ ಭವನದಲ್ಲಿ ಇದೇ ಭಾನುವಾರ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಕಾರ್ತೀಕೇಯನ್,ಜೆಸಿಐ ವಲಯ ಅಧ್ಯಕ್ಷೆ ಯಶಸ್ವಿನಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ, ಸಭಾಧ್ಯಕ್ಷರಾಗಿ ಜೆಸಿಐ ವಲಯ ಉಪಾಧ್ಯಕ್ಷ ಕೆ.ಡಿ.ಪ್ರಶಾಂತ್ ಇರಲಿದ್ದಾರೆ.
ಜೆಸಿಐ ಇತಿಹಾಸದಲ್ಲಿ ಮಲೆನಾಡು ಪ್ರಾಂತ್ಯದಲ್ಲಿ ಇದು ಎರಡನೆ ಸಮ್ಮೇಳನವಾಗಿದ್ದು, ಇದು ಕಳಸ ಜೆಸಿಐ ಆತಿಥ್ಯದಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಇದು ಹೆಮ್ಮೆ ತರುವ ವಿಷಯವಾಗಿದೆ ಎಂದು ಕಳಸ ಜೆಸಿಐ ಅಧ್ಯಕ್ಷ ಚರಣ್ ಭಂಡಾರಿ ತಿಳಿಸಿದ್ದಾರೆ.


