ಕಳಸ ಲೈವ್ ವರದಿ
ಕಳಸ ಜೆಸಿಐ ಘಟಕದ ಆಥಿತ್ಯದಲ್ಲಿ ಭಾನುವಾರ ಕಳಸದ ಮಹಾವೀರ ಭವನದಲ್ಲಿ ಜೆಸಿಐ ವಲಯ 14ರ ಅಭಿವೃದ್ದಿ ಮತ್ತು ಬೆಳವಣಿಗೆ ಸಮ್ಮೇಳನ ನಡೆಯಿತು.
ಸಮ್ಮೇಳನದಲ್ಲಿ ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾರ್ತಿಕೇಯನ್ ಮಾತನಾಡಿ ಕಳಸದಂತ ಗ್ರಾಮೀಣ ಪ್ರದೇಶದ ಘಟಕಗಳಿಂದಲೇ ಇಂದು ಜೆಸಿಐ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ.ಕಳಸದಂತ ಗ್ರಾಮೀಣ ಪ್ರದೇಶದಲ್ಲಿ ಜೆಸಿಐ ಸಂಸ್ಥೆಯನ್ನು ಅಚ್ಚುಕಟ್ಟಾಗಿ ಬೆಳಿಸಿಕೊಂಡು ಹೋಗಲಾಗುತ್ತಿದೆ.ಜೆಸಿಐ ಒಂದು ವ್ಯಕ್ತಿತ್ವ ವಿಕಸನ ಸಂಸ್ಥೆ.ಇದು ಇವತ್ತಿಯ ಯುವ ಜನಾಂಗಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ ಸಂಸ್ಥೆಯ ಬೆಳವಣಿಗೆ ಎಷ್ಟು ಮುಖ್ಯವೋ ಅದರ ಜೊತೆಯಲ್ಲಿ ವಯಕ್ತಿಕವಾದ ಅಭಿವೃದ್ಧಿ ಮತ್ತು ಬೆಳವಣಿಗೆಯೂ ಅತೀ ಮುಖ್ಯವಾಗಿದೆ. ಜೆಸಿಐ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತ್ರ ಒಬ್ಬ ಜೆಸಿ ಆಗಿರಬೇಡಿ. ನಿಮ್ಮ ನಿತ್ಯ ಜೀವನದಲ್ಲೂ ಕೂಡ ಒಬ್ಬ ನಿಷ್ಠಾವಂತ, ಪ್ರಾಮಾಣಿಕ, ಸಹೃದಯ ಜೆಸಿ ಆಗಿರುವುದನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿರುವುದು ಹೌದಾದರೆ ಮಾತ್ರ ಅದು ನಿಜವಾದ ಬೆಳವಣಿಗೆ ಮತ್ತು ಅಭಿವೃದ್ಧಿ ಎಂದು ಹೇಳಿದರು.

ಸಮ್ಮೇಳದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಮಾಡಿ ಹೆಚ್ಚು ಅಂಕಪಡೆದ ಮೊದಲ 10 ಘಟಕಗಳಿಗೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಕಾರ್ತಿಕೇಯನ್ ಪ್ರಶಸ್ತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಡಿ.ಪ್ರಶಾಂತ್ ವಹಿಸಿದ್ದರು.ರಾಷ್ಟ್ರೀಯ ಉಪಾಧ್ಯಕ್ಷ ಭರತ್ ಎನ್ ಆಚಾರ್ಯ, ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಉಪಾಧ್ಯಕ್ಷರಾದ ಹೆಚ್.ಆರ್.ಪ್ರಶಾಂತ್, ನೆಲ್ಸನ್, ಕಳಸ ಜೆಸಿಐ ಅಧ್ಯಕ್ಷ ಚರಣ್ ಭಂಡಾರಿ, ಕಾರ್ಯದರ್ಶಿ ಶ್ರೀಕಾಂತ್ ಇತರರು ಇದ್ದರು.


