ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹಳುವಳ್ಳಿಯ ರತ್ನಮ್ಮ ರವರ ಅನಾರೋಗ್ಯದಿಂದ ಬಳಲುತಿದ್ದು, ಇವರ ಚಿಕಿತ್ಸೆಗಾಗಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ 30000/- ದ ಸಹಾಯಧನದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಸುರೇಶ್ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ರಂಗನಾಥ್ ಭಟ್, ವಲಯ ಮೇಲ್ವಿಚಾರಕರಾದ ಶ್ರೀನಿವಾಸ್, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಗಿರಿಜಮ್ಮ, ಸೇವಾಪ್ರತಿನಿಧಿ ಶ್ರೀಮತಿ ಸುನಿತಾ ರವರು ಉಪಸ್ಥಿತರಿದ್ದರು.



