


ಕಳಸ ಲೈವ್ ವರದಿ
ಕಳಸದ ಮುಖ್ಯ ರಸ್ತೆಯ ಶ್ರೀ ನೀಲಕಂಠ ಕಾಂಪ್ಲೆಕ್ಸ್ ನಲ್ಲಿ ಸನ್ನಿಧಿ ಫ್ಯಾಷನ್ ವರ್ಲ್ಡ್ ಪುರಷರ ಬಟ್ಟೆ ಶೋ ರೂಂ ಗುರುವಾರ ಉದ್ಘಾಟನೆಗೊಂಡಿತು.
ಶೋ ರೂಂ ಉದ್ಘಾಟನೆ ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ಮಾಡಿದರು.ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಜೆಸಿಐ ಅಧ್ಯಕ್ಷ ಚರಣ್, ಜೆಸಿಐ ವಲಯ ಉಪಾಧ್ಯಕ್ಷ ಪ್ರಶಾಂತ್, ಕಳಸ ತಾಲ್ಲೂಕು ಛಾಯಗ್ರಾಹಕ ಸಂಘದ ಕಾರ್ಯದರ್ಶಿ ರವಿ ಸುವರ್ಣ, ಮರಸಣಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ, ಬಾಬು ಪೂಜಾರಿ, ಆಶಾ ಸುಧೀಶ್ ಸುವರ್ಣ, ಸನ್ನಿಧಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶೋ ರೂಂ ಮಾಲಿಕ ಸುದೀಶ್ ಸುವರ್ಣ ಮಾತನಾಡಿ ಸನ್ನಿಧಿ ಪ್ಯಾಷನ್ ವರ್ಲ್ಡ್ ಪುರುಷರ ಬಟ್ಟೆಗಳು ಮಾತ್ರ ಲಭ್ಯವಾಗಿದ್ದು, ಉತ್ತಮ ಗುಣಮಟ್ಟ, ಮತ್ತು ಬ್ರಾಂಡೆಡ್ ವಿವಿಧ ಕಂಪನಿಗಳ ಬಟ್ಟೆಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ ಎಂದು ಹೇಳಿದರು.

