ಕಳಸ ವೈವ್ ವರದಿ
ಪ್ರತಿ ವರ್ಷ ಕಳಸದ ಸಂತೆ ಮಾರುಕಟ್ಟೆ ಸಮೀಪ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಈ ಬಾರಿ ಕಳಸ ಕೆಪಿಎಸ್ ಪ್ರೌಡ ಶಾಲಾ ಮೈದಾಣದಲ್ಲಿ 4 ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಕಳಸದ ಸಂತೆ ಮಾರುಕಟ್ಟೆ ಸಮೀಪ ಪಟಾಕಿಗಳ ಮಾರಾಟಕ್ಕೆ ಅನುಮತಿಯನ್ನು ನೀಡಲಾಗುತ್ತಿತ್ತು.ಆದರೆ ಅಲ್ಲಿ ಆಸು ಪಾಸು ಜನ ವಸತಿ ಇರುವ ಪ್ರದೇಶವಾಗಿರುವುದರಿಂದ ಈ ಬಾರಿ ಆ ಸ್ಥಳದಲ್ಲಿ ಪಟಾಕಿ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡದೆ, ಕೆಪಿಎಸ್ ಪ್ರೌಢ ಸಾಲ ಆಟದ ಮೈದಾನದಲ್ಲಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಶನಿವಾರದಿಂದ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಈ ಬಾರಿ ಪಟಾಕಿ ಮಾರಾಟಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ.ಪ್ರತಿ ಮಳಿಗೆ ಮಧ್ಯೆ ಜಾಗ ಖಾಲಿ ಬಿಡಲಾಗಿದೆ.ಮಳಿಗೆಗಳಲ್ಲಿ ಅಗ್ನಿಶಾಮಕ ಸಾಧನ ಮತ್ತು ನೀರಿನ ಡ್ರಮ್ ಇರಿಸಲಾಗಿದೆ, ಪೈರ್ ಬಕೆಟ್ ಗಳಲ್ಲಿ ಮಣ್ಣು ತುಂಬಿಸಿ ಇರಿಸಲಾಗಿದ್ದು, ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.
