
ಕಳಸ ಲೈವ್ ವರದಿ
ತಾ|| 22-01-2024ರ ಪುಷ್ಯ ಶುದ್ದ ದ್ವಾದಶಿ ಸೋಮವಾರದಂದು ಮಧ್ಯಾಹ್ನ 12:20ರ ಶುಭ ಮುಹೂರ್ತಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಪ್ಠಾ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.ಈ ದಿನ ಹೊರನಾಡಿನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕಲ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಈ ವಿಶೇಷ ದಿನದಂದು ಸಮಸ್ತ ಭಕ್ತರ ಪರವಾಗಿ ಶ್ರೀಕ್ಷೇತ್ರ ಹೊರನಾಡಿನಲ್ಲಿ ಬೆಳಿಗ್ಗೆ 09-00 ಗಂಟೆಗೆ “ಶ್ರೀರಾಮ ತಾರಕ ಹೋಮ” ಪ್ರಾರಂಭವಾಗುತ್ತದೆ. ಬೆಳಿಗ್ಗೆ 11-45 ಕ್ಕೆ ಪೂರ್ಣಾಹುತಿಯು ನೆರವೇರುತ್ತದೆ. ಇದರ ಜೊತೆಯಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಬೆಳಿಗ್ಗೆ 11-00 ಗಂಟೆಯವರೆಗೆ “ಶ್ರೀ ಹರಿದಾಸ ವೈ.ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ ಶ್ರೀ ರಾಮಾಯಣದ ಬಾಲಕಾಂಡ ಎಂಬ “ಹರಿಕತೆ” ಪ್ರಸಂಗ ಕಾರ್ಯಕ್ರಮ ನಡೆಯುತ್ತದೆ. ಹಾಗೆಯೇ ರಾಮ ದೇವರ ಭಜನೆ, ಮತ್ತು ರಾಮನಾಮ ಸಂಕೀರ್ತನೆ ಸಮರ್ಪಣೆ ಆಗಲಿದೆ. ನಂತರ ಶ್ರೀರಾಮನ ಪ್ರತಿಷ್ಠಾ ಸಮಯಕ್ಕೆ ಶ್ರೀ ರಾಮದೇವರಿಗೆ ಪೂಜೆಯು ಸಂಪನ್ನಗೊಳ್ಳಲಿದೆ.
ಸಂಜೆ ಜ್ಯೋತಿ ಬೆಳಗುವ ಮುಖಾಂತರವಾಗಿ ಶ್ರೀ ರಾಮನ ಪುನಃ ಪ್ರತಿಷ್ಠಾ ಕಾರ್ಯಕ್ರಮವನ್ನು ಸಂಭ್ರಮಿಸುತ್ತಿದ್ದೇವೆ. ಜೊತೆಗೆ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಲು ಶ್ರೀಕ್ಷೇತ್ರದಲ್ಲಿ ವ್ಯವಸ್ಥೆ ಮಾಡಿರುತ್ತೇವೆ. ಈ ಎಲ್ಲಾ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಂಡು ಪುಣ್ಯಭಾಜನರಾಗಬೇಕಾಗಿ ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.


