
ಕಳಸ ಲೈವ್ ವರದಿ
ಕಳಸದ ಸಾಹಿತಿ ಬರಹಗಾರ ವೈ. ಪ್ರೇಮ್ ಕುಮಾರ್ ಅವರ ಮೂಡಲ ಮೌನ ಸಣ್ಣ ಕಥೆಗಳ ಪುಸ್ತಕ ಬಿಡುಗಡೆ ಮಾ 2ಕ್ಕೆ ಬಿಡುಗಡೆಗೊಳ್ಳಲಿದೆ.
ಮಾ 2ರಂದು ಸಂಜೆ 4 ಗಂಟೆಗೆ ಪಟ್ಟಣದ ಸಾಯಿ ಮಂದಿರದಲ್ಲಿ ನಡೆಯುವ ಕನ್ನಡ ಜಾನಪದ ಪರಿಷತ್ ಕಳಸ ತಾಲ್ಲೂಕು ಘಟಕದ ಪದಗ್ರಹಣ ಸಮಾರಂಭದಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದ್ದು, ಕ.ಜಾ.ಪ ಜಿಲ್ಲಾ ಘಟಕ ಅಧ್ಯಕ್ಷ ಓಣಿತೋಟ ರತ್ನಾಕರ್, ಮಾಜಿ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷೆ ಸುಜಯಸದಾನಂದ, ಗೌರವಾಧ್ಯಕ್ಷ ಸೂರಿ ಶ್ರೀನಿವಾಸ್, ಕಳಸ ಕ.ಜಾ.ಪ ನಿಯೋಜಿತ ಅಧ್ಯಕ್ಷ ಅಜಿತ್ ಪ್ರಸಾದ್, ರಂಗಭೂಮಿ ಕಲಾವಿದ ರಾಜಗೋಪಾಲ ಜೋಷಿ ಹೊರನಾಡು, ಕಿರುತೆರೆ ಕಲಾವಿದ ಮಂಜುನಾಥ್ ಭಟ್, ಕಳಸ ಉಪ ತಹಶೀಲ್ದಾರ್ ಶ್ರೀಮತಿ ಸುಧಾ, ಕೆಕೆಬಿ ಬಸ್ ಮಾಲಿಕ ಕೆ.ಕೆ.ಬಾಲಕೃಷ್ಣ ಭಟ್ ಉಪಸ್ಥಿತಿ ಇರಲಿದ್ದಾರೆ.
ವೈ.ಪ್ರೇಮ್ ಕುಮಾರ್ ಅವರ ಇತ್ತೀಚೆಗಷ್ಟೆ ಬಿಡುಗಡೆಗೊಂಡ ಹೇರೆತ್ತು ಕಾದಂಬರಿ ಸಾಕಷ್ಟು ಜನಮನ್ನಣೆ ಗಳಿಸಿತ್ತು.ಇದೀಗ ಅವರ ಎರಡನೆ ಪುಸ್ತಕ ಬಿಡುಗಡೆಗೆ ಸಿದ್ದಗೊಂಡಿದೆ.