ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನೂಡಿ ಗ್ರಾಮದ ಅಳಗೋಡು ಎಂಬಲ್ಲಿ ಕುಡಿಯಲು ನೀರಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, ಇಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಬತ್ತಿ ಹೋಗಿದ್ದು, ಕುಡಿಯಲು ನೀರು ಬರುತ್ತಿಲ್ಲ.ಮೂರು ಕಿಮೀ ದೂರದಿಂದ ಪೈಪ್ ಲೈನ್ ಅಳವಡಿಸಿದ್ದಾರೆ ಆದರೆ ಕಾಡು ಪ್ರಾಣಿಗಳ ದಾಳಿಯಿಂದ ಪೈಪ್ ಲೈನ್ ಹಾಳಾಗಿದೆ ಅಲ್ಲದೆ ಪೈಪ್ ಲೈನ್ ಅಳವಡಿಸಿದ್ದ ಹಳ್ಳದಲ್ಲೂ ನೀರು ಬತ್ತಿ ಹೋಗಿದೆ.ಕುಡಿಯುವ ನೀರಿಗಾಗಿ ಕಗ್ಗನಳ್ಳದಲ್ಲಿ ರಿಂಗ್ ಭಾವಿ ನಿರ್ಮಿಸಲಾಗಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.ಕುಡಿಯುವ ನೀರಿಗಾಗಿ ಸಾಕಷ್ಟು ಕಾಮಗಾರಿಗಳನ್ನು ನಡೆಸಲಾಗಿದೆ ಆದರೆ ಯಾವುದೇ ಕಾಮಗಾರಿಯನ್ನು ಸರಿಯಾಗಿ ನಡೆಸದೆ ಬಿಲ್ ತೆಗೆದುಕೊಳ್ಳಲಾಗಿದೆ ಹೊರತು ಗ್ರಾಮಕ್ಕೆ ಒಂದು ಹನಿ ನೀರು ಬರುತ್ತಿಲ್ಲ.
ಇದರಿಂದ ನಮ್ಮ ಗ್ರಾಮದಲ್ಲಿರುವ ಕುಟುಂಬಗಳಿಗೆ ಕುಡಿಯವ ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದಾರೆ.
Related Stories
October 6, 2024