ಕಳಸ ಲೈವ್ ವರದಿ
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಾ 11 ರಿಂದ ಮಾ 15 ರ ವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಹೊರನಾಡಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಐದು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಮಾ 11 ರಂದು ರಥೋತ್ಸವಾಂಗ ಶ್ರೀ ಗಣಪತಿ ಪೂಜೆ, ಶ್ರೀ ಮಹಾ ಗಣಪತಿ ಹೋಮ ಮತ್ತು ರಾತ್ರಿ ಮಹಾರಂಗ ಪೂಜೆ.
ಮಾ 12 ರಂದು ಮಧ್ಯಾಹ್ನ ಧ್ವಜಾರೋಹಣ ರಾತ್ರಿ ಪುಷ್ಪಕರೋಹಣ.
ಮಾ 13 ರಂದು ಮಧ್ಯಾಹ್ನ 12.22 ಅಭಿಜಿನ್ ಲಗ್ನದಲ್ಲಿ ಶ್ರೀ ಬ್ರಹ್ಮರಥೋತ್ಸವ,ರಾತ್ರಿ 10 ಗಂಟೆಗೆ ಶ್ರೀ ಮನ್ ಮಹಾರಥೋತ್ಸವ ನಡೆಯಲಿದೆ.
ಮ 14 ರಂದು ಕುಂಕುಮೋತ್ಸವ,ಅವಭೃತಸ್ನಾನ,ರಾತ್ರಿ ಇಡಿಗಾಯಿ ಸೇವೆ,ದ್ವಜಾವರೋಹಣ. ಮಾ 15ರಂದು ನಡೆಯುವ ಸಂಪ್ರೋಕ್ಷಣೆಯೊಂದಿಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ತಿಳಿಸಿದ್ದಾರೆ.
