ಕಳಸ ಲೈವ್ ವರದಿ
ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾರ್ಚ್ 7ರಂದು ರಾತ್ರಿ 8 ಗಂಟೆಯಿಂದ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಾರಣಕಟ್ಟೆ ಇವರಿಂದ “ಶ್ರೀ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಯಕ್ಷಗಾನದ ಸೇವಾರ್ಥದಾರರಾದ ವಿ.ಎಸ್.ರಂಗನಾಥ್ ವಲ್ಲೀಕುಡಿಗೆ ತಿಳಿಸಿದ್ದಾರೆ.
