ಕಳಸ ಲೈವ್ ವರದಿ
ಕಳಸ ತಾಲೂಕಿನ ಸಂಸೆ ಸರ್ಕಾರಿ ಪ್ರೌಢ ಶಾಲೆಗೆ 2023-24ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 100% ಫಲಿತಾಂಶ ಬಂದಿದೆ.
ಈ ಬಾರಿ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ 21 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಮರು ಮೌಲ್ಯಮಾಪನದಲ್ಲಿ ಆ ವಿದ್ಯಾರ್ಥಿಯು ಉತ್ತೀರ್ಣನಾದ ಹಿನ್ನಲೆಯಲ್ಲಿ ಶಾಲೆಗೆ ಶೇ100% ಫಲಿತಾಂಶ ಬಂದಂತಾಗಿದೆ.


