ಕಳಸ ಲೈವ್ ವರದಿ
ಕಳಸದ ಸಾಹಿತಿ, ಬರಹಗಾರ ವೈ ಪ್ರೇಮ್ ಕುಮಾರ್ ಅವರ ಹೊನ್ನ ಕಿರಣ ಸಣ್ಣ ಕತೆಗಳು ಪುಸ್ತಕ ಬಿಡುಗಡೆಗೆ ಸಿದ್ದಗೊಂಡಿದೆ.
ಇದೇ ತಿಂಗಳ ಕೊನೆಗೆ ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದ ಪ್ರೇಮ್ ಕುಮಾರ್ ಸ್ಪಷ್ಟ ದಿನಾಂಕವನ್ನು ತಿಳಿಸಲಿಲ್ಲ.
ಕೆಲವೇ ತಿಂಗಳ ಹಿಂದೆ ಪ್ರೇಮ್ ಕುಮಾರ್ ಅವರ ಹೇರೆತ್ತು ಕಾದಂಬರಿ ಎರಡನೇ ಪುಸ್ತಕ ಮೂಡಲ ಮೌನ ಹಾಗೂ ಇದೀಗ ಮೂರನೇ ಪುಸ್ತಕ ಹೊನ್ನ ಕಿರಣ ಬಿಡುಗಡೆಗೆ ಸಿದ್ದಗೊಂಡಿದೆ. ಕಾಡೆಡೆಗೆ, ಬೇಂದ್ರೆ ಮಾಸ್ತಾರ್, ಮಾರ್ನಳ್ಳಿ ಅಂಜೆ ಕಛೇರಿ ಪುಸ್ತಕಗಳು ಕೂಡ ಮುದ್ರಣ ಹಂತದಲ್ಲಿದೆ ಎಂದು ಪ್ರೇಮ್ ಕುಮಾರ್ ಮಾಹಿತಿ ನೀಡಿದ್ದಾರೆ.


