ಕಳಸ ಲೈವ್ ವರದಿ
ಚಿಕ್ಕಮಗಳೂರು ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ.) ಇವರ ಆಯೋಜಕತ್ವದಲ್ಲಿ ಮೂಡಿಗೆರೆಯ ಬಿ.ಜಿ.ಎಸ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕಳಸ ಜೆಇಎಂ ಶಾಲೆಯ ಕೆ.ಪಿ ಸಿದ್ಧಾಂತ್ ಪ್ರಭು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
15 ರ ವಯೋಮಾನದವರ ವಿಭಾಗದಲ್ಲಿ ಒಟ್ಟಾರೆ 74 ಸ್ಪರ್ಧಾಳುಗಳು ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ್ದು, 6 ಸುತ್ತಿನಲ್ಲೂ ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜೆ .ಇ.ಎಮ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿದ್ಧಾಂತ್ ಪ್ರಭು ಕಳೆದ ಸಾಲಿನಲ್ಲಿಯೂ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಚೆಸ್ ಪಂದ್ಯಾವಳಿಯಲ್ಲಿಯೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ್ದು ಇದೀಗ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.


