
ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ಮತ್ತು ಸಂಜೀವಿನಿ ಸಂಘದ ವತಿಯಿಂದ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಶಾಲೆಯ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಪಿಡಿಒ ಕವೀಶ್, ಆದರ್ಶ್, ಶಾಲಾ ಪ್ರಾಚಾರ್ಯ ಸುನೀತ ಬಡಿಗೇರ, ಪಂಚಾಯಿತಿ ಸದಸ್ಯರಾದ ಜಮಿಳಾ ರಫೀಕ್, ಜಯಲಕ್ಷ್ಮೀ, ಸಂಜೀವಿನಿ ಸಂಘದ ಸದಸ್ಯರಾದ ಗೀತಾ, ಕವಿತ, ಪ್ರಶಾಂತಿ, ಶಮಿರಾ ಇತರರು ಇದ್ದರು.


