
ಕಳಸ ಲೈವ್ ವರದಿ
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ವತಿಯಿಂದ ಜೂನ್ 16ರಂದು “ಮುಂಗಾರು ಸಾಹಿತ್ಯ ಸಂಜೆ” ಕಾರ್ಯಕ್ರಮ ನಡೆಯಲಿದೆ.
ಮಕ್ಕಿಮನೆಯಲ್ಲಿ ಮದ್ಯಾಹ್ನ 2-30ಗೆ ಈ ಕಾರ್ಯಕ್ರಮ ನಡೆಯಲಿದ್ದು ಅಂದು ಶ್ರೀಮತಿ ಗೀತಾ ಮಕ್ಕಿಮನೆ ಇವರ “ಭಾವಬಿಂಬ” ಕವನ ಸಂಕಲನ ಮತ್ತು ಶ್ರೀಮತಿ ಚಂಪಕ ರಾಘವೇಂದ್ರ ಇವರ “ನಗೆಮಿಂಚು” ಹಾಸ್ಯ ಲೇಖನಗಳ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಕಳಸ, ಇದರ ಅಧ್ಯಕ್ಷರಾದ ಶ್ರೀಮತಿ ಮಲ್ತಾಜ್ ಬೇಗಮ್ ವಹಿಸಿಕೊಳ್ಳಲಿದ್ದಾರೆ.
ಉದ್ಘಾಟಕರು ಶ್ರೀಮತಿ ರಾಜಲಕ್ಷ್ಮೀ ಬಿ. ಜೋಷಿ ಶ್ರೀಕ್ಷೇತ್ರ, ಹೊರನಾಡು. ಪುಸ್ತಕ ಬಿಡುಗಡೆ ಸೂರಿ ಶ್ರೀನಿವಾಸ್ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು. ಪ್ರಾಸ್ತಾವಿಕ ನುಡಿ ಅ. ರಾ. ಸತೀಶ್ಚಂದ್ರ ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಳಸ. ಆಶಯ ನುಡಿ ಎಸ್.ಎಸ್. ವೆಂಕಟೇಶ್ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು. ಮುಖ್ಯ ಅತಿಥಿಗಳಾಗಿ ಗೋಪಾಲ್ ಯಡಗೆರೆ ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು, ಶಿವಮೊಗ್ಗ. ಕೆ. ಕೆ. ಬಾಲಕೃಷ್ಣ ಭಟ್ ಮಾಲೀಕರು, ಶ್ರೀ ಅನ್ನಪೂರ್ಣೇಶ್ವರೀ ಮೋಟಾರ್ಸ್, ಕಳಸ. ಹೆಚ್.ಆರ್. ಪಾಂಡುರಂಗ ಜಿಲ್ಲಾ ಸಂಚಾಲಕರು, ಕ.ಸಾ.ಪ., ಚಿಕ್ಕಮಗಳೂರು. ಶ್ರೀಮತಿ ಮನೋರಾಧಿನಿ ಧರಣೇಂದ್ರ ಗೌರವಾಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಕಳಸ. ಶೇಖರ ಶೆಟ್ಟಿ, ಅಧ್ಯಕ್ಷರು, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕಳಸ. ವೈ. ಪ್ರೇಮ್ ಕುಮಾರ್ ಸಾಹಿತಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು, ಕ.ಸಾ.ಪ., ಕಳಸ ಹೋಬಳಿ ಇವರು ಇರಲಿದ್ದಾರೆ.