
ಕಳಸ ಲೈವ್ ವರದಿ
ಕಳಸದ ಕಚಗಾನೆ ಎಂಬಲ್ಲಿ ರಸ್ತೆ ಬದಿಗೆ ನಿರ್ಮಾಣ ಮಾಡಿದ ತಡೆಗೋಡೆ ಒಂದು ವರ್ಷದ ಒಳಗಾಗಿ ನೆಲಕ್ಕಚ್ಚಿದ್ದು, ಪರಿಣಾಮ ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಅವರ ಮನೆ ಮತ್ತು ಜೀಪ್ ಗೆ ಹಾನಿಯಾಗಿದೆ.
ಬುಧವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಗುರುವಾರ ಬೆಳಿಗ್ಗೆ ಕಳಸ ತಾಲೂಕಿನ ಕಚಗಾನೆ ಎಂಬಲ್ಲಿ ರಸ್ತೆಯ ಅಂಚಿಗೆ ಕಳೆದ ಒಂದು ವರ್ಷದ ಹಿಂದೆಯಷ್ಟೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಪರಿಣಾಮ ಜೀಪ್ ಸಂಪೂರ್ಣ ಜಖಂಗೊಂಡಿದ್ದು, ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ತಡೆಗೋಡೆಯನ್ನು ಕಳೆದ ಒಂದು ವರ್ಷದ ಹಿಂದೆ ರಸ್ತೆ ಮತ್ತು ತಡೆಗೋಡೆ ಸೇರಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.ಇದರಲ್ಲಿ ಒಂದು ಭಾಗ ಸುಮಾರು 10 ಲಕ್ಷ ವೆಚ್ಚದ ತಡೆಗೋಡೆ ಸಂಪೂರ್ಣ ನೆಲಕ್ಕಚ್ಚಿದೆ.
ಲಕ್ಷಾಂತರ ರೂ ವೆಚ್ಚ ಮಾಡಿ ಕಟ್ಟಿದ ತಡೆಗೋಡೆ ಒಂದು ವರ್ಷ ಆಗುವುದರ ಒಳಗಾಗಿ ನೆಲಕ್ಕಚ್ಚಿದ ಪರಿಣಾಮ ತಡೆಗೋಡೆಯ ಗುಣಮಟ್ಟದ ಅಸಲಿಯತ್ತನ್ನು ಎತ್ತಿ ತೋರಿಸುತ್ತಿದೆ.