ಕಳಸ ಲೈವ್ ವರದಿ
ಕಳಸ ಭದ್ರಾ ನದಿಯ ಗೇರು ತೋಟ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಮೃತ ಮಹಿಳೆ ಎನ್ ಆರ್ ಪುರದ ಶಾರದಾ(55) ಎಂದು ತಿಳಿದು ಬಂದಿದೆ.
ಶಾರದ ಅವರು ಜುಲೈ 16 ಹಲ್ಲುನೋವಿಗೆ ಎನ್ ಆರ್ ಪುರಕ್ಕೆ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟವರು ನಂತರ ಮನೆಗೆ ಬರದೆ ಕಾಣೆಯಾಗಿದ್ದರು.ಈ ಬಗ್ಗೆ ಜುಲೈ 18 ರಂದು ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಅವರು ಕಳಸಕ್ಕೆ ಬಂದಿದ್ದರು ಎನ್ನುವ ಸುದ್ದಿ ಹರಡಿತ್ತು.
ಈಗ ಕಳಸ ಭದ್ರಾ ನದಿಯಲ್ಲಿ ಪತ್ತೆಯಾಗಿರುವ ಶವ ಶಾರದ ರವರದ್ದೆ ಎಂದು ಅವರ ಕುಟುಂಬಸ್ಥರು ಗುರುತಿಸಿದ್ದಾರೆ.
ಭದ್ರಾ ನದಿಯಿಂದ ಶೌರ್ಯ ವಿಪತ್ತು ತಂಡದ ನೆರವಿನಿಂದ ಶವವನ್ನು ಮೇಲೆತ್ತಿ ಕಳಸ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.