
ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಗಾಳಿ ಮಳೆಯ ಅಬ್ಬರ ಮುಂದುರೆದಿದ್ದು ಪರಿಣಾಮ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಲೆ ಬೆಳ್ಳಮ್ಮ ನವರ ಮನೆಯ ಮೇಲೆ ಮರ ಬಿದ್ದು,ಮನೆಗೆ ಹಾನಿಯಾಗಿದೆ.
ಮನೆಯ ಒಳಗಿದ್ದ ಬೆಳ್ಳಮ್ಮನ ಕೈಕಾಲುಗಳಿಗೆ ಪೆಟ್ಟಾಗಿದ್ದು ಗಾಯಗೊಂಡ ಬೆಳ್ಳಮ್ಮನನ್ನು ಕಂಬಳಿಯಲ್ಲಿ ಕಟ್ಟಿ ಹೊತ್ತು ತಂದು ಆಸ್ಪತ್ರೆ ಸೇರಿಸಲಾಗಿದೆ.
ಬೆಳ್ಳಮ್ಮನ ಮನೆಯಿಂದ ಬರುವಾಗ ಸಿಗುವ ಹಳ್ಳಕ್ಕೆ ಸೇತುವೆ ಇಲ್ಲದೆ ಇರುವುದರಿಂದ ಗಾಯಗೊಂಡ ಬೆಳ್ಳಮ್ಮನನ್ನು ಹೊತ್ತು ಕೊಂಡು ಬರಬೇಕಾಯ್ತು.