ಕಳಸ ಲೈವ್ ವರದಿ
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಕಾರ್ಯಾರಂಭಿಸಿದ್ದು ಶಾಸಕಿ ನಯನಾ ಮೋಟಮ್ಮ ಮಂಗಳವಾರ ಉದ್ಘಾಟಿಸಿದ್ದಾರೆ.
ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಸುಸಜ್ಜಿತ ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡುತ್ತಿವೆ. ನುರಿತ ಸಿಬ್ಬಂದಿ ಕೂಡ ಇದ್ದಾರೆ. ಪ್ರತಿದಿನ 8 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ಇಲ್ಲಿದೆ.
ಈವರೆಗೂ ಡಯಾಲಿಸಿಸ್ ಮಾಡಿಸಿಕೊಳ್ಳಲು ದೂರದ ಊರಿನ ಆಸ್ಪತ್ರೆಗೆ ಹೋಗುತ್ತಿದ್ದ ರೋಗಿಗಳಿಗೆ ಇದು ವರದಾನ ಆಗಲಿದೆ.ಜೊತೆಗೆ ರೋಗಿಗಳಿಗೆ ಹಣದ ಉಳಿತಾಯ ಕೂಡ ಆಗಲಿದೆ.
ಉದ್ಘಾಟನೆಯ ಸಂದರ್ಭದಲ್ಲಿ ಕಳಸ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಸದಾನಂದ, ಮುಖಂಡರಾದ ಕೆ.ಆರ್. ಪ್ರಭಾಕರ್, ರಾಜೇಂದ್ರ ಪ್ರಸಾದ್, ಮಹಮ್ಮದ್ ರಫೀಕ್, ಕೆ.ಎ.ಶ್ರೇಣಿಕ, ವಿಶ್ವನಾಥ್, ಕೆ.ಸಿ.ಮಹೇಶ್, ಶ್ರೀನಿವಾಸ್, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ಗಣೇಶ್ ಭಟ್, ಸುಜಿತ್ ಜೈನ್, ಪ್ರವೀಣ್, ಕೆ.ಎಲ್.ವಾಸು, ರಾಮಚಂದ್ರ ಹೆಬ್ಬಾರ್, ಪ್ರಭಾಮಣಿ, ಪಂಚಾಯಿತಿ ಸದಸ್ಯರಾದ ವೀರೇಂದ್ರ ಜೈನ್, ಸುಜಯ ಸದಾನಂದ ಇತರರು ಇದ್ದರು.