ಕಳಸ ಲೈವ್ ವರದಿ
ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪೊಟ್ಶೆಫ್ಟ್ರೂಮ್ ನಲ್ಲಿ ನಡೆದ ಏಷ್ಯಾ-ಪೆಸಿಫಿಕ್-ಆಫ್ರಿಕನ್ ಪವರ್ಲಿಪ್ಟಿಂಗ್ ಮತ್ತು ಬೆಂಚ್ಪ್ರೆಸ್ ಚಾಂಪಿಯನ್ ಶೀಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿ ಬೋಳ ಇವರನ್ನು ಕಳಸದ ಗೆಳೆಯರ ಬಳಗದಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಮುಖ್ಯಸ್ಥ ಸುಧಾಕರ್ ಮಾತನಾಡಿ ಪವರ್ ಲಿಪ್ಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಕ್ಷತಾ ಪೂಜಾರಿ ಬೋಳ ಅವರು ಹಲವಾರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಏಷ್ಯಾಮಟ್ಟದ ಕಾಮನ್ವೆಲ್ತ್ ಕೂಟ ಮತ್ತು ವಿಶ್ವಮಟ್ಟದಲ್ಲಿ ಹಲವಾರು ಚಿನ್ನದ ಪದಕ ಜಯಿಸಿರುವ ಅಕ್ಷತಾ ಅವರು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಅಕ್ಷತಾ 2011ರ ಕಾಮನ್ವೆಲ್ತ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶೀಪ್ನಲ್ಲಿ ಚಿನ್ನದ ಪದಕ, 2014ರಲ್ಲಿ ಅಮೇರಿಕ ಲಾಸ್ ವೆಗಸ್ನಲ್ಲಿ ನಡೆದ ವಿಶ್ವ ಬೆಂಚ್ಪ್ರೆ ಚಾಂಪಿಯನ್ಶೀಪ್ ನಲ್ಲಿ ಎರಡು ಚಿನ್ನ, ದುಬೈನಲ್ಲಿ 2018ರಲ್ಲಿ ನಡೆದ ಬೆಂಚ್ಪ್ರೆ ಚಾಂಪಿಯನ್ಶೀಪ್ ನಲ್ಲಿ ಎರಡು ಚಿನ್ನ, ಕಜಕಿಸ್ತಾನದಲ್ಲಿ ನಡೆದ ವಿಶ್ವ ಬೆಂಚ್ಪ್ರೆ ಚಾಂಪಿಯನ್ಶೀಪ್ ನಲ್ಲಿ ಬೆಳ್ಳಿ ಪದಕ ಗೆದ್ದು ಸಾದನೆ ಮಾಡಿದ್ದಾರೆ ಎಂದು ಹೇಳಿದರು.
ಅಕ್ಷತಾ ಪೂಜಾರಿ ಮಾತನಾಡಿ ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು. ತಮಗೆ ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ಇವೆ. ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳು ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕು, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ ಕೂಡ ಆರ್ಥಿಕ ಸಮಸ್ಯೆಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡ ಇಂತಹ ಕ್ಷೇತ್ರಗಳಿಗೆ ಉತ್ತೇಜನ ನೀಡಿದಾಗ ಸಾಕಷ್ಟು ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಬಿ.ಕೆ.ಮಹೇಶ್, ಶಿವಪ್ರಸಾದ್, ವಿದ್ಯಾನಂದ, ಅಶೋಕ್ ಜಾವಳಿ, ದಿವ್ಯ, ಶಿಲ್ಪಾ, ಆಶಾ ಸುವರ್ಣ ಇತರರು ಇದ್ದರು.