ಕಳಸ ಲೈವ್ ವರದಿ
ಕಳಸ ಎ ವಲಯ ಮರಸನಿಗೆ ಕಾರ್ಯಕ್ಷೇತ್ರದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ) ಕಳಸ ತಾಲೂಕು,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮರಸನಿಗೆ ,ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಜ್ಞಾನವಿಕಾಸ ಮಹಿಳಾ ಕೇಂದ್ರಗಳು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ಘಟಕ ಹಾಗೂ ನವ ಜೀವನ ಸಮಿತಿಗಳು ಕಳಸ ಎ ವಲಯ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಮರಸಣಿಗೆ ಇವರು ವಹಿಸಿದ್ದರು, ಕಾಫಿ ಬೆಳೆಗಾರರಾದ ಮಕ್ಕಿತಲೆ ವರ್ಧಮಾನಯ್ಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ವಿವಿಧ ಕಾರ್ಯಕ್ರಮಗಳದ ಸುಜ್ಞಾನ ನಿಧಿ, ಸಹಾಯಧನ ,ಜ್ಞಾನದೀಪ ಶಿಕ್ಷಕಿಯರ ಮಂಜೂರಾತಿ ಪತ್ರ,ಜಲಮಂಗಲ ಸಲಕರಣೆ ವಿತರಣೆ ,ನವ ಜೀವನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿಗಳಾದ ನಾಗರಾಜ್ ಕುಲಾಲ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮುರಳಿದರ ಭಟ್, ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಎಮ್ ಎನ್ ರಘುನಾಥ ಯೋಜನಾಧಿಕಾರಿ ಸುರೇಶ್, ಶ್ರೀ ಪ್ರಕಾಶ್ ದೇಶಪಾಂಡೆ ಅಜಿತ್ ಕುಲಾಲ್ ಕ್ಯಾಪ್ಟನ್, ಕಿರಣ್ ಶೆಟ್ಟಿ, ಸಂಪತ್ ಕುಮಾರ್ ಇತರರು ಇದ್ದರು.
Related Stories
September 18, 2024