oplus_0

ಕಳಸ ಲೈವ್ ವರದಿ
ಕಳಸದ ದುರ್ಗಾ ಮಂಟಪದಲ್ಲಿ ಸಾರ್ವಜನಿಕ ಶ್ರೀದುರ್ಗಾಪೂಜಾ ಸಮಿತಿಯಿಂದ ನಡೆಯುತ್ತಿರುವ 36ನೇ ವರ್ಷದ ಸಾರ್ವಜನಿಕ ಶ್ರೀದುರ್ಗಾಪೂಜಾ ಮಹೋತ್ಸವಕ್ಕೆ ಸಂಸೆ ಮುಸ್ಲಿಂ ಬಾಂಧವರು ಹಸಿರುವಾಣಿ ಹೊರೆಕಾಣಿಕೆಯನ್ನು ಸಮರ್ಪಿಸಿ ಸೌಹಾರ್ದತೆ ಮೆರೆದಿದ್ದಾರೆ.

ಮುಸ್ಲಿಂ ಬಾಂಧವರು ಅಕ್ಕಿ, ಬೇಳೆ ಕಾಳು, ಎಣ್ಣೆ, ಬೆಲ್ಲ, ಸಕ್ಕರೆ, ಬಾಳೆಗೊನೆ ಮಂತಾದ ಹಲವಾರು ಬಗೆಯ ಸುವಸ್ತುಗಳನ್ನು ತಂದು ಸಮರ್ಪಿಸಿದರು.
ಮೆರವಣಿಗೆಯಲ್ಲಿ ಬಂದ ಮುಸ್ಲಿಂ ಬಾಂಧವರನ್ನು ಸಮಿತಿ ವತಿಯಿಂದ ಬರ ಮಾಡಿಕೊಂಡು ಪ್ರಸಾದ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸೆ ರಹಮಾನಿಯ ಜುಮ್ಮಾ ಮಸೀದಿ ಅಧ್ಯಕ್ಷ ಬದ್ರುದ್ದೀನ್, ಕಾರ್ಯದರ್ಶಿ ಹನೀಫ್, ಖಜಾಂಚಿ ಅಜೀಜ್, ಸದಸ್ಯರಾದ ಇಬ್ರಾಹಿಂ, ಎ.ಕೆ. ರಫೀಕ್, ಕೆ.ಎಂ. ರಜಾಕ್, ಮೊಹಿದ್ದೀನ್ ಭಾಪು, ಶರೀಫ್, ಬಿ.ಎಂ. ರಫೀಕ್ ಇತರರು ಇದ್ದರು.


