ಕಳಸ ಲೈವ್ ವರದಿ
ಇಲ್ಲಿಯ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿನಲ್ಲಿ ಅಕ್ಟೋಬರ್ 03 ರಿಂದ ಅಕ್ಟೋಬರ್ 15 ರವರೆಗೆ ಶರನ್ನವರಾತ್ರಾ ಮಹೋತ್ಸವ ಸಹಿತ ಶ್ರೀಮನ್ ಮಹಾಚಂಡಿಕಾ ಹೋಮ,ಪಟ್ಟಾಭಿಷೇಕೋತ್ಸವ ಜೀವ-ಭಾವ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಅ 03 ರಂದು ಹಂಸಾರೂಢಾ ಸರಸ್ವತೀ ಅಲಂಕಾರ ಪೂಜೆ,ಶ್ರೀ ಪಂಚದುರ್ಗಾ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಕ್ತಿಗೀತೆಗಳು, ರಾತ್ರಿ ಭರತನಾಟ್ಯ
ಅ 04 ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಭರತ ನಾಟ್ಯ
ಅ 05 ರಂದು ಸಿಂಹರೂಢಾ ಚಂದ್ರಘಂಟಾ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಪುರುಷಸೂಕ್ತ ಹೋಮ,ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಗಮ ಸಂಗೀತ, ಸಂಜೆ ಭರತ ನಾಟ್ಯ
ಅ 06 ರಂದು ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀಸೂಕ್ತ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಭರತನಾಟ್ಯ.
ಅ 07 ರಂದು ಮಕರಾರೂಢಾ ಸ್ಕಂದಮಾತಾ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಲಿತಾ ಮೂಲಮಂತ್ರ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವೀಣಾವಾದನ, ಸಂಜೆ ಭರತನಾಟ್ಯ.
ಅ 08 ರಂದು ಮಯೂರಾರೂಢಾ ಕಾತ್ಯಾಯಿನೀ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸರಸ್ವತಿ ಮೂಲಮಂತ್ರ ಹೋಮ ಸಾಂಸ್ಕøತಿಕ ಕಾರ್ಯಕ್ರಮದ ಬೆಳಿಗ್ಗೆ ಸುಗಮ ಸಂಗೀತ, ಸಂಜೆ ಕೂಚಿಪುಡಿ
ಅ 09 ರಂದು ಅಶ್ವಾರೂಢಾ ಗೌರೀ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶಾರದಾ ಪೂಜೆ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಕ್ತಿ ಸಂಗೀತ, ಸಂಜೆ ಯಕ್ಷಗಾನ ನಡೆಯಲಿದೆ.
ಅ 10 ರಂದು ವೃಷಭಾರೂಢಾ ತ್ರಿಮೂರ್ತಿ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮೂಲಮಂತ್ರ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಗಮ ಸಂಗೀತ, ಸಂಜೆ ಭರತನಾಟ್ಯ
ಅ 11 ರಂದು ರಂದು ಸಿಂಹಾರೂಢಾ ಸಿಧ್ಧಿಧಾತ್ರೀ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವೀಣಾ ವಾದನ, ಸಂಜೆ ಭರತನಾಟ್ಯ.
ಅ 12 ವಿಜಯದಶಮಿ ವಿಜಯೋತ್ಸವ, ಪೌಜಿನ ಮೆರವಣಿಗೆ,ಸಾಂಸ್ಕøತಿಕ ಕಾರ್ಯಕ್ರಮ ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಭರತನಾಟ್ಯ.
ಅ 13 ರಂದು ಉದ್ಭವ ಗಣಪತಿ ಮತ್ತು ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ,ಶ್ರೀ ಗಣಪತಿ ಅಥರ್ವಶೀರ್ಷ ಹೋಮ,ಪವಮಾನ ಅಭಿಷೇಕ, ಶ್ರೀ ರುದ್ರಹೋಮ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಕ್ತಿ ಸಂಗೀತ, ಸಂಜೆ ಭರತ ನಾಟ್ಯ.
ಅ 14 ರಂದು ಅಭಿಷೇಕ ಸಹಿತ ವಿಶೇಷ ಪೂಜೆ ಶ್ರೀಮನ್ ಮಹಾಚಂಡಿಕಾ ಹೋಮ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶಾಸ್ತ್ರೀಯ ಸಂಗೀತ, ಸಂಜೆ ನಾದಸ್ವರ ವಾದನ ನಂತರ ಯಕ್ಷಗಾನ.
ಅ 15ರಂದು ನವಗ್ರಹ ಹೋಮ ಮತ್ತು ಧರ್ಮಕರ್ತರ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ ಮತ್ತು ಪಟ್ಟಾಭಿಷೇಕೋತ್ಸವ. ಜೀವ-ಭಾವ ಮತ್ತು ಜ್ಞಾನೇಶ್ವರಿ ಜನಸೇವಾ ಟ್ರಸ್ಟ್, ಜೀವನಸಂಜೆ ವೃದ್ಧಾಶ್ರಮ ಗಾಡಿಕೊಪ್ಪ ಶಿವಮೊಗ್ಗ ಇವರಿಗೆಶ್ರೀ ಮಾತಾ ಪ್ರಶಸ್ತಿ ಪ್ರದಾನ ಸಮಾರಂಭ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಯಕ್ಷಗಾನ ನಡೆಯಲಿದೆ.
ನವರಾತ್ರಿಯ ಪ್ರತೀದಿನ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ನಾದಸ್ವರ ವಾದನ, ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ದೇವಾಲಯದ ಧರ್ಮಕರ್ತರಾದ ಡಾ|ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.



