

ಕಳಸ ಲೈವ್ ವರದಿ
ಇತ್ತೀಚೆಗೆ ಕೋಲಾರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 17ವರ್ಷದೊಳಗಿನ ಅತ್ಲೇಟಿಕ್ಸ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಳಸ ಜೆ ಇ ಎಂ ಪ್ರೌಢಶಾಲೆ ವಿದ್ಯಾರ್ಥಿನಿ ವಿಧುಷಾ ಜೈನ್ 3000ಮೀಟರ್ ನಡಿಗೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಕಳಸದ ಕೆಳಂಗಡಿಯ ಶ್ರೀಮತಿ ವೀಣಾ ಮತ್ತು ಸತ್ಯೇಂದ್ರ ಇವರ ಮಗಳಾದ ವಿಧುಷಾ ಕಳೆದ ಶೈಕ್ಷಣಿಕ ಸಾಲಿನಲ್ಲೂ ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಜೆ ಇ ಎಂ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧುಷಾಳ 2ವರ್ಷಗಳ ಸತತವಾದ ಪ್ರಯತ್ನವೇ ಗೆಲುವಿಗೆ ಕಾರಣವಾಗಿದೆ ಎನ್ನುತ್ತಾರೆ ತರಬೇತುದಾರ ಶಿಕ್ಷಕ ಪ್ರಶಾಂತ್. ಹಾಗೂ ಶಾಲಾ ಆಡಳಿತ ಮಂಡಳಿ, ಶಾಲೆಯ ಶಿಕ್ಷಕ ವರ್ಗ, ಪೋಷಕರ ಸಹಕಾರ ಮತ್ತು ನನ್ನ ಶಾಲೆಯ ಎಲ್ಲಾ ಸ್ನೇಹಿತರ ಪ್ರೋತ್ಸಾಹವೇ ನನ್ನ ಗೆಲುವಿಗೆ ಕಾರಣವಾಗಿದೆ ಎನ್ನುತ್ತಾರೆ ವಿದುಷ.


