

ಕಳಸ ಲೈವ್ ವರದಿ
ಕಳಸ:ಇಲ್ಲಿನ ಕಳಸ ಯುವಕ ಸಂಘ, ಪಟ್ಟಣದ ಕಾವೇರಿ ಸ್ಮಾರಕ ಆಸ್ಪತ್ರೆ ಮತ್ತು ಮಂಗಳೂರಿನ ಎಜೆ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ದಿ.ಎನ್.ಎಂ.ಹರ್ಷ ಸ್ಮರಣಾರ್ಥ ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ 100ಕ್ಕೂ ಹೆಚ್ಚು ಜನರಿಗೆ ವಿವಿಧ ತಪಾಸಣೆ ನಡೆಸಲಾಯಿತು. ಮಹಿಳೆಯರಿಗೆ ಸ್ತನ ಮತ್ತು ಗರ್ಭಕೋಶದ ಕ್ಯಾನಸ್ರ್ ಪತ್ತೆ ವಿಧಿಗಳನ್ನು ನಡೆಸಲಾಯಿತು. ಹೃದಯ ತಪಾಸಣೆಗೆ ಉಚಿತ ಇಸಿಜಿ ಮಾಡಲಾಯಿತು.
ಎ.ಜೆ.ಆಸ್ಪತ್ರೆ ವೈದ್ಯ ಮತ್ತು ಸಿಬ್ಬಂದಿಗಳು ಹಾಗೂ ಕಳಸ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕಾರ್ಯದರ್ಶಿ ವೀರೇಂದ್ರ, ಪದಾಧಿಕಾರಿಗಳಾದ ಸತ್ಯೇಂದ್ರ, ವಾಸುದೇವ, ಥಾಮಸ್, ಸನ್ನಿ, ಪ್ರಭಾಕರ್, ಅರುಣ್, ಸುಬ್ಬಣ್ಣ, ಸುನಿಲ್, ಅನಿಲ್, ಧರಣೇಂದ್ರ, ಕೃಷ್ಣಮೂರ್ತಿ, ಶ್ರೀನಾಥ್, ಲಕ್ಷ್ಮೀಶ, ವಸುಪಾಲ್, ದಿನೇಶ್, ಅಜಿತ್, ಮೆಲ್ವಿನ್, ಸದಾನಂದ, ದಿನೇಶ್, ಸಂತೋಷ್ ಭಾಗವಹಿಸಿದ್ದರು.


