
ಕಳಸ ಲೈವ್ ವರದಿ
ಕಳಸ-ಕುದುರೆಮುಖ-ಎಸ್ ಕೆ ಬಾರ್ಡರ್ ರಸ್ತೆ ಬದಿಯ ಚರಂಡಿ ಅರ್ಥ್ ವರ್ಕ್ ಕಾಮಗಾರಿಗೆ ಪುನಃ ಗ್ರಹಣ ಹಿಡಿದೆಡೆ.
ಕಳೆದ ಕೆಲ ದಿವಸಗಳ ಹಿಂದೆ ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆ ಬದಿಯ ಚರಂಡಿ ನಿರ್ವಹಣೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿತ್ತು. ಆದರೆ ಜೇಸಿಬಿ ಬಳಸಿ ರಸ್ತೆಗೆ ಬಾಗಿದ ಮರವನ್ನು ಕಡಿಯಬಾರದು ಎಂದು ಅರಣ್ಯ ಇಲಾಖೆಯವರು ಆಕ್ಷೇಪಣೆ ಮಾಡಿದ ಹಿನ್ನೆಲೆಯಲ್ಲಿ ಕುದುರೆಮುಖದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.
ಪ್ರತಿಭಟನೆಯಲ್ಲಿ ಹಾಜರಿದ್ದ ಕುದುರೆಮುಖ ಅರಣ್ಯ ವಲಯ ಅರಣ್ಯ ಅಧಿಕಾರಿ ಚೇತನ್ ರವರು ರಸ್ತೆಗೆ ಬಾಗಿದ ಮರಗಳನ್ನು ಜೆಸಿಬಿಯಲ್ಲಿ ತೆಗೆಯಬಾರದು, ಮ್ಯಾನುಯಲ್ ಆಗಿ ತೆಗೆಯುವುದಾದರೆ ನಮ್ಮ ಯಾವುದೇ ಆಕ್ಷೇಪಣೆ ಎಂದು ಹೇಳಿದ್ದರು.
ಇದರಂತೆ ಕಳೆದ ಶುಕ್ರವಾರದಿಂದ ಮತ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿತ್ತು.ಆದರೆ ಜೆಸಿಬಿಯಲ್ಲಿ ಮರಗಳನ್ನು ತೆಗೆಯುತ್ತಿದ್ದನ್ನು ಕಂಡ ಕಾರ್ಕಳ ಡಿಎಫ್ಓ ಶಿವರಾಮ್ ಬಾಬುರವರು ಅರ್ಥ್ ವರ್ಕ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಹಾಗಾಗಿ ಚರಂಡಿ ಬದಿಯ ಅರ್ಥ್ ವರ್ಕ್ ಕಾರ್ಯವನ್ನು ಗುತ್ತಿಗೆದಾರ ಸ್ಥಗಿತಗೊಳಿಸಿದ್ದಾರೆ.