ಕಳಸ ಲೈವ್ ವರದಿ
ಬೆಳೆ ವಿಮೆ ಬಿಡುಗಡೆ ವಿಳಂಬ ಕುರಿತು ಇತ್ತೀಚೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕಳಸ ಬಿಜೆಪಿ ಮುಖಂಡರು ಬೇಟಿ ಮಾಡಿ ಬೆಳೆ ವಿಮೆ ಬಿಡುಗಡೆ ಗೊಳಿಸುವಂತೆ ಗಮನ ಸೆಳೆದರು.
ಜಿಲ್ಲೆಯ ಕಳಸ ತಾಲೂಕಿನ ಆರು ಗ್ರಾಮ ಪಂಚಾಯತಿಯ ಸಾವಿರಾರು ರೈತರಿಗೆ ಹಾಗು ಕೊಪ್ಪ ತಾಲೂಕು ವ್ಯಾಪ್ತಿಯ ರೈತರಿಗೆ ಈ ಬಾರಿಯ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆ ಯಾಗದಿರುವ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ತುರ್ತು ಜಿಲ್ಲಾ ಮಟ್ಟದ ತೋಟಗಾರಿಕೆ ಹಾಗು ಬೆಳೆ ವಿಮಾ ಕಂಪನಿ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಬೆಳೆ ವಿಮೆ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಳವಳ ವ್ಯಕ್ತ ಪಡಿಸಿ ಇದರಲ್ಲಿ ಏನೇ ಸಮಸ್ಯೆ ಲೋಪಗಳಿದ್ದರು ಬಗೆಹರಿಸಿ ಕೂಡಲೇ ಈ ಬಾಗದ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಲು ಕಟ್ಟು ನಿಟ್ಟಿನ ಆದೇಶ ಮಾಡಿದರು.
ಈ ಸಂದರ್ಭದಲ್ಲಕಿ ಈ ಸಭೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಎಂ.ಎ. ಶೇಷಗಿರಿ ಕಳಸ, ಕಾಫಿ ಬೋರ್ಡ್ ಸದಸ್ಯರಾದ ಭಾಸ್ಕರ್ ಕೊಪ್ಪ, ಬಿಜೆಪಿ ಮುಖಂಡರುಗಳಾದ ಕಲ್ಮರಡಪ್ಪ, ಕೆ.ಸಿ. ನಾಗೇಶ್, ರಾಜೇಶ್, ಹೇಮಂತ್ ಜೈನ್, ಅನಿಲ್ ಕುಮಾರ್, ಸುಂದರ ಶೆಟ್ಟಿ ಇತರರು ರೈತರ ಪರವಾಗಿ ಸಭೆಯಲ್ಲಿ ಬೆಳೆ ವಿಮೆ ವಿಳಂಬದ ಬಗ್ಗೆ ಸಂಸದರ ಗಮನ ಸೆಳೆದರು.


