oplus_262144
ಕಳಸ ಲೈವ್ ವರದಿ
ಪ್ರವಾಸಿಗರಿಂದ ಕಳಸ ತಾಲ್ಲೂಕು ತುಂಬಿದ್ದು, ಭಾನುವಾರ ಎಲ್ಲೆಡೆ ಜನದಟ್ಟಣೆ ಉಂಟಾಗಿದೆ.ಎರಡನೇ ಶನಿವಾರ, ಭಾನುವಾರ ಹಾಗೂ ವರ್ಷಾಂತ್ಯದ ಹಿನ್ನಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ.
ಕಳಸಕ್ಕೆ ಬರುವ ಬಹುತೇಕ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯುಲ್ಲಿ ಪ್ರವಾಸಿಗರ ವಾಹನಗಳು ಸಂಚರಿಸಿವೆ.ಕೆಲವೆಡೆ ವಾಹನ ದಟ್ಟಣೆಗಳು ಉಂಟಾಗಿವೆ.ಕಳಸ ಮುಖ್ಯ ರಸ್ತೆಯ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಸ್ಥಳೀಯರು ಕಿರಿ ಕಿರಿ ಅನುಭವಿಸಿದರು.ಆಗಾಗ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸರಿ ಪಡಿಸಲು ಪೊಲೀಸರು ಹರಸಹಾಸ ಪಡುತ್ತಿದ್ದರು.
ತಾಲ್ಲೂಕಿನ ಪ್ರವಾಸಿತಾಣಗಳಾದ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಮೈದಾಡಿ, ಕ್ಯಾತನಮಕ್ಕಿ, ವಶಿಷ್ಠಾಶ್ರಮ, ಅಂಭಾತೀರ್ಥ, ಸುರುಮನೆ ಜಲಪಾತ, ಕುರುಂಜಲ್ ಗುಡ್ಡ, ದಾರ್ಮಿಕ ಕ್ಷೇತ್ರಗಳಾದ ಹೊರನಾಡು, ಕಳಸ ಕ್ಷೇತ್ರಗಳು ಪ್ರವಾಸಿಗರಿಂದ ತುಂಬಿ ತುಳುಕಿದವು.


