ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಜನವರಿ 2ರಂದು ಶ್ರೀ ಸರಸ್ವತಿ ಪೂಜಾ, ಕೃತಂಸ್ಮರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ
ಅಂದು ಬೆಳಿಗ್ಗೆ 10-30ಗೆ ಕಾರ್ಯಕ್ರಮ ನಡೆಯಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಲೇಖಕ ಪಿ.ಡಿ.ಗುರುಪ್ರಸಾದ್ ಭಟ್ ಉಡುಪಿ,ಅನಿತಾ ಜಿ ಭಟ್, ಪ್ರಬೋಧಿನಿ ವಿದ್ಯಾ ಕೇಂದ್ರ ಅಧ್ಯಕ್ಷ ವೆಂಕಟಸುಬ್ಬಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ.
ಮಧ್ಯಾಹ್ನ 2-30ಗೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.ಗುರುಪ್ರಸಾದ್ ಭಟ್ ಅವರ ಛತ್ರಪತಿ-ನಾಕಂಡಂತೆ ಶಿವಾಜಿ ಮತ್ತು ರಣದುರಂಧರ ಛತ್ರಪತಿ ಶಿವಾಜಿ ಹಾಗೂ ಕಳಸ ಬಾಲಕೃಷ್ಣ ಕಾಮತ್ ಅವರ ಧ್ಯೇಯ ಕಾರಂಜಿ ಪುಸ್ತಕ ಬಿಡುಗಡೆ ನಡೆಯಲಿದೆ.

