
ಕಳಸ ಲೈವ್ ವರದಿ
ಕಳಸ ತಾಲ್ಲೂಕು ಮಟ್ಟದ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನ ಸಭೆ ಕಳಸ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ ಮಾತನಾಡಿ ಕಳಸ ತಾಲ್ಲೂಕಿನಲ್ಲಿ ಗ್ಯಾರೆಂಟಿ ಯೋಜನೆಯನ್ನು ನೂರಕ್ಕೆ ನೂರು ಅನುಷ್ಠಾನ ಗೊಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಕ್ಕೆ ಏರಿಸಲಾಗುವುದು ಹಾಗೂ ಇನ್ನು ಮುಂದೆ ಎರಡು ತಿಂಗಳಿಗೊಮ್ಮೆ ಕಳಸದಲ್ಲಿ ಗ್ಯಾರೆಂಟಿ ಯೋಜನೆ ಸಮಿತಿಯ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಕಳಸ ತಾಲ್ಲೂಕು ಅಧ್ಯಕ್ಷ ಗಣೇಶ್ ಭಟ್ ಮಾತನಾಡಿ ಕಳಸ ತಾಲ್ಲೂಕಿನಲ್ಲಿ ಗ್ಯಾರೆಂಟಿ ಯೋಜನೆ ಯಾರಿಗೆ ತಲುಪಿಲ್ಲ ಮತ್ತು ಯಾರ ಅರ್ಜಿ ವಿಲೇವಾರಿ ಬಾಕಿ ಇದೆ ಅಂತವರನ್ನು ಸಂಪರ್ಕಿಸಿ ಯೋಜನೆಯನ್ನು ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದಯಾವತಿ ಮಾತನಾಡಿ ಈಗಾಗಾಲೇ ಕಳಸ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ 7376 ಫಲಾನುಭವಿಗಳಿಗೆ ತಲುಪಿದ್ದು, ಗೃಹಜ್ಯೋತಿ ಯೋಜನೆ 11221 ಫಲಾನುಭವಿಗಳಿಗೆ ತಲುಪಿದೆ. ಅನ್ನಭಾಗ್ಯ ಯೋಜನೆ ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 24811 ಫಲಾನುಭವಿಗಳಿಗೆ ತಲುಪಿದೆ ಎಂದು ಮಾಹಿತಿ ನೀಡಿದ ಅವರು ಸಮಿತಿಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಳಸ-ಬಸರಿಕಟ್ಟೆ- ಶೃಂಗೇರಿಗೆ, ಮೂಡಿಗೆರೆ-ಕಳಸ-ಕುದುರೆಮುಖ-ಕಾರ್ಕಳ ಸರ್ಕಾರಿ ಬಸ್ಸನ್ನು ಹಾಕಬೇಕೆಂಬ ಮನವಿಯನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಕೇಶವ, ಮಂಜಯ್ಯ, ಶ್ರೀನಿವಾಸ,ಅಬ್ದುಲ್ ಫಾರೂಕ್, ಸುನೀಲ್ ಕುಮಾರ್, ರಜನಿ ಹೆಚ್.ಟಿ, ರೂಪಾಶ್ರೀ, ಸೌಜಿತ್, ಮಹೇಶ್, ಎ.ಎಂ.ಮಂದಾರ, ಸಂಪತ್, ಸ್ಟೀಪನ್ ಇದ್ದರು.