ಕಳಸ ಲೈವ್ ವರದಿ
ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಕಳಸ ತಾಲ್ಲೂಕಿನಿಂದ ಎಂ.ಬಿ. ಸಂತೋಷ್ ಹಿನಾರಿ ಆಯ್ಕೆಯಾಗಿದ್ದಾರೆ.
ನಿರ್ದೇಶಕ ಸ್ಥಾನಕ್ಕಾಗಿ ಶನಿವಾರ ಚುನಾವಣೆ ನಡೆದಿತ್ತು.ಕಳಸ ತಾಲ್ಲೂಕಿನಿಂದ ಕೆ.ಆರ್.ಪ್ರಭಾಕರ್ ಮತ್ತು ಸಂತೋಷ್ ಹಿನಾರಿ ಸ್ಪರ್ಧಿಗಳಾಗಿದ್ದರು.
ಭಾನುವಾರ ನಡೆದ ಮತದಾನದ ಎಣಿಕೆಯಲ್ಲಿ ಸಂತೋಷ್ ಹಿನಾರಿ ಎರಡು ಮತಗಳ ಅಂತರದಿಂದ ಜಯಶೀಲರಾಗಿ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.


