
ಕಳಸ ಲೈವ್ ವರದಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರತಿಷ್ಠಿತ ಯಕ್ಷಸಿರಿ ಪ್ರಶಸ್ತಿಗೆ ಹಳುವಳ್ಳಿ ಜ್ಯೋತಿ ಭಟ್ ಆಯ್ಕೆಯಾಗಿದ್ದಾರೆ.
ಕಳಸ ತಾಲ್ಲೂಕಿನ ಹಳುವಳ್ಳಿಯ ಇವರು ದಿ। ಟಿ. ಕೃಷ್ಣ ರಾವ್ ಹಾಗೂ ರಾಧಮ್ಮ ದಂಪತಿ ಪುತ್ರಿ. 1988ರಲ್ಲಿ ಯಕ್ಷಗಾನ ರಂಗಕ್ಕೆ ಬಂದ ಇವರು ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡದಲ್ಲಿ ವೇಷ ಮಾಡಿದ ಅನುಭವ. ಅನಂತರ ಭಾಗವತಿಕೆ, ಯಕ್ಷಗಾನ ನಾಟ್ಯಾಭ್ಯಾಸ ನೀಡಿ, ಮಹಿಳಾ ಹಾಗೂ ಮಕ್ಕಳ ಶ್ರೀ ಕುಮಾರ ಸಾಂಸ್ಕೃತಿ ಪ್ರತಿμÁ್ಠನ ಹಳುವಳ್ಳಿ ತಂಡ ಕಟ್ಟಿ ಸ್ವಂತ ವೇಷಭೂಷಣ, ಮುಮ್ಮೇಳ ತಂಡವನ್ನು ಮುನ್ನೆಡೆಸುತ್ತಿದ್ದಾರೆ
ಯಕ್ಷಸಿರಿ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಫಲಕ ಹೊಂದಿದ್ದು, ಈ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 16ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ. ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯ ಜೊತೆಗೆ ಗೌರವ ಪ್ರಶಸ್ತಿ, , ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವೂ ಅಂದೇ ನಡೆಯಲಿದೆ.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳರ್, ಶಾಸಕರು ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.