
ಕಳಸ ಲೈವ್ ವರದಿ
ಕಳಸ ಶ್ರೀ ಕಲಶೇಶ್ವರಸ್ವಾಮಿ ದೇವರ ಪರಿವಾರ ದೇವರುಗಳಾದ ವಶಿಷ್ಠ ಗಣಪತಿ, ಕಾಲಬೈರವ, ದುರ್ಗಾಂಬಾ, ಬಿಂದು ಮಾಧವ ದೇವರುಗಳಿಗೆ ಜನವರಿ 18ರಿಂದ ಜನವರಿ 24ರ ವರೆಗೆ ಜೀರ್ಣಾಷ್ಠಬಂಧ ಕಲಶಾಭಿಷೇಕ ನಡೆಯಲಿದೆ.
ಜನವರಿ 18ರಂದು ಶ್ರೀ ವಶಿಷ್ಠ ಗಣಪತಿ ಹಾಗೂ ಕಾಲಬೈರವ ಸ್ವಾಮಿ ದೇವಾಲಯದಲ್ಲಿ ಸಂಜೆ ಅನುಗ್ರಹ ಸ್ಥಪನ ಕಲಶ-ಕಲಾಸಂಕೋಚ.ಜನವರಿ 19 ರಂದು ಬೆಳಿಗ್ಗೆ ಅಷ್ಠಬಂಧ ಸಂಯೋಜನೆ ಕಲಾಶಾಭಿಷೇಕ-ಮಂಗಳಾರತಿ ನಂತರ ದೇವಾಲಯದ ದಾಸೋಹ ಭವನದಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ.
ಜನವರಿ 19ರಂದು ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಪರಿವಾರ ದೇವರುಗಳಿಗೆ ಸಂಜೆ ಅನುಗ್ರಹ ಸ್ಥಪನ ಕಲಶ-ಕಲಾಸಂಕೋಚ. ಜನವರಿ 20ರಂದು ಬೆಳಿಗ್ಗೆ ಅಷ್ಠಬಂಧ ಸಂಯೋಜನೆ ಕಲಾಶಾಭಿಷೇಕ-ಮಂಗಳಾರತಿ ನಂತರ ಪ್ರಸಾದ ವಿನಿಯೋಗ.
ಜನವರಿ 23ರಂದು ದುರ್ಗಾಂಬಾ ದೇವಾಲಯ ಮತ್ತು ಬಿಂದು ಮಾಧವ ಸ್ವಾಮಿ ದೇವಾಲಯದಲ್ಲಿ ಸಂಜೆ ಅನುಗ್ರಹ ಸ್ಥಪನ ಕಲಶ-ಕಲಾಸಂಕೋಚ. ಜನವರಿ 24ರಂದು ಬೆಳಿಗ್ಗೆ ಅಷ್ಠಬಂಧ ಸಂಯೋಜನೆ ಕಲಾಶಾಭಿಷೇಕ-ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.