ಕಳಸ ಲೈವ್ ವರದಿ
ವರದಕ್ಷಿಣೆ ಕಿರುಕುಲ ಆರೋಪ ಎದುರಿಸುತ್ತಿದ್ದ ಕಳಸ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಕಳಸ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತ್ಯಾನಂದ ಗೌಡ ಮೇಲೆ ಪತ್ನಿ ಅಮಿತಾ ವರದಕ್ಷಿಣೆ ಕಿರುಕುಳ ಕುರಿತು ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜನವರಿ 17ರಂದು ನಿತ್ಯಾನಂದ ಗೌಡ ಪತ್ನಿ ಅಮಿತಾ ಅವರ ಮೇಲೆ ಹಲ್ಲೆ ನಡೆಸಿ ಕೆನ್ನೆಗೆ ಹೊಡೆದು ಕಾಲಿನಿಂದ ಒದ್ದು ರೂಮಿನಿಂದ ಹೊರ ಹಾಕಿದ್ದು, 50 ಲಕ್ಷ ವರದಕ್ಷಿಣೆ ನೀಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ನೀಡಲು ಬಂದ ಹೆಣ್ಣುಮಕ್ಕಳ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸುವುದಲ್ಲದೆ ಪಾಸ್ ಪೋರ್ಟ್ ಮಾಡಲು ಬರುವ ಮಹಿಳೆಯರನ್ನು ಲೈಂಗಿಕ ಸಂಪರ್ಕಕ್ಕೆ ಕರೆಯುತ್ತಾನೆ ಎಂದು ಆರೋಪಿಸಲಾಗಿತ್ತು.ಅಲ್ಲದೆ ಈ ಹಿಂದೆ ಕಾಪು ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹಾಗೆಯೆ ಕೋಟ ಬ್ರಹ್ಮಾವರ ಠಾಣೆಯಲ್ಲಿ ಮಹಿಳೆಯರಿಗೆ ನ್ಯಾಯ ಕೊಡಿಸುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಕಳಸ ಪೊಲೀಸ್ ಠಾಣೆಯಲ್ಲಿ ಪಿಎಸೈ ನಿತ್ಯಾನಂದ ಗೌಡ ಸೇರಿದಂತೆ ನಾಲ್ಕು ಜನರ ವಿರುದ್ದ ದೂರು ದಾಖಲಾಗಿತ್ತು.ಈ ಹಿನ್ನಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.




