


ಕಳಸ ಪಟ್ಟಣದ ಅನ್ನಪೂಣೇಶ್ವರೀ ಮಹಿಳಾ ಮಂಡಳಿ ಸಭಾಂಗಣದಲ್ಲಿ ಹೈ ಫ್ಯಾಷನ್ ಬಿಗ್ ಬಜಾರ್ ಗೆ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಇಲ್ಲಿ ಗೃಹೋಪಯೋಗಿ ವಸ್ತುಗಳು, ಪ್ಲಾಸ್ಟಿಕ್ ಐಟಮ್ಸ್, ಗಿಪ್ಟ್ ಐಟಮ್ಸ್ ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಗ್ರಾಹಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೈ ಫ್ಯಾಷನ್ ಬಿಗ್ ಬಜಾರ್ ಮಾಲಿಕ ತಿಮ್ಮರಾಯನ್ ಮಾತನಾಡಿ ಪ್ರತೀ ವರ್ಷ ಇಲ್ಲಿ ನಾವು ಬಜಾರ್ ಹಾಕುತ್ತಿದ್ದೇವೆ.ಇಲ್ಲಿ ಮಹಿಳಾ ಮಂಡಳಿ ನಮಗೆ ಸಾಕಷ್ಟು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾರೆ.ಹಾಗೂ ಇಲ್ಲಿಯ ಜನ ನಮಗೆ ಉತ್ತಮ ಸ್ಪಂದನೆಯನ್ನು ನೀಡುತ್ತಿದ್ದಾರೆ.ನಮ್ಮಲ್ಲಿ ಸಿಗುವ ಎಲ್ಲಾ ವಸ್ತುಗಳು ಕೇವಲ 120 ರೂ ಗೆ ಸಿಗುತ್ತದೆ.ಎರಡು ತಿಂಗಳು ಇಲ್ಲಿ ನಾವು ಬಜಾರ್ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಶ್ರೀಮತಿ ಕಲ್ಪನಾ, ಶ್ರೀಮತಿ ಅಮಿತಾ, ಶ್ರೀಮತಿ ಆಶಾ, ಶ್ರೀಮತಿ ಮೇನಕಾ ಇದ್ದರು.



