
ಕಳಸ ಲೈವ್ ವರದಿ
ಅರಣ್ಯ ಹಕ್ಕು ಪತ್ರಕ್ಕೆ ಮೂಲಭೂತ ಸೌಲಭ್ಯವನ್ನು ನೀಡುವಂತೆ ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಳಸ ತಹಸೀಲ್ದಾರ್ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ವಾಸವಾಗಿರುವ ಶೇ 90ರಷ್ಟು ಗಿರಿಜನರು ಅರಣ್ಯ ಹಕ್ಕು ಕಾಯ್ದೆ 2006ರಡಿಯಲ್ಲಿ ಹಕ್ಕುಪತ್ರವನ್ನು ಹೊಂದಿದ್ದು, ಈ ಅರಣ್ಯ ಹಕ್ಕುಪತ್ರಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲವಾದ್ದರಿಂದ ಮುಂದೆ ದೊರಕಬಹುದಾದ ಸೌಲಭ್ಯಗಳನ್ನು ಪಡೆಯಲು ಅರಣ್ಯ ಹಕ್ಕುಪತ್ರ ಹೊಂದಿರುವ ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಿದ್ದು, ಈ ರೈತರಿಗೆ ಬೆಳೆ ದೃಢೀಕರಣ ಪತ್ರವನ್ನು ನೀಡಬೇಕು, ಅರಣ್ಯಹಕ್ಕು ಪತ್ರ ಹೊಂದಿರುವ ಕುಟುಂಬದ ಮುಖ್ಯಸ್ಥರು ಮರಣ ಹೊಂದಿರುವ ಸಂದರ್ಭದಲ್ಲಿ ಕುಟುಂಬದ ಇತರ ಫಲಾನುಭವಿಗಳ ಹೆಸರನ್ನು ಪಹಣಿಯ ಕಲಂ 11ರಲ್ಲಿ ನಮೂದಿಸಬೇಕು, ಅರಣ್ಯಹಕ್ಕು ಪತ್ರ ಹೊಂದಿರುವ ಫಲಾನುಭವಿಗಳ ಹೆಸರು ಫೂಟ್ ಐಡಿಯಲ್ಲಿ ನಮೂದಾಗಿದ್ದು, ತೋಟಗಾರಿಕೆ ಇಲಾಖೆಯಿಂದ ಫಲಾನುಭವಿ ಹೊಂದಿರುವ ಜಮೀನಿನ ವಿಸ್ತೀರ್ಣವನ್ನು ಅನುಮೋದಿಸಿಕೊಡಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಸಂದರ್ಭದಲ್ಲಿ ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅನಿಲ್ ಮುಜೇಕಾನು, ಕಾರ್ಯದರ್ಶಿ ಗಣೇಶ್ ಕುಕ್ಕೋಡು, ನಿರ್ದೇಶಕರುಗಳಾದ ಸತೀಶ್ ಒಡ್ಡಿಕಟ್ಟೆ, ದಿನೇಶ್ ಎಸ್.ಕೆ ಮೇಗಲ್, ಸುರೇಶ್ ಕೆರ್ನಾಳಿ, ಶ್ರೀನಿವಾಸ್ ಕೆರ್ನಾಳಿ, ಮೇಘಾನಂದ ಬೇಡಕ್ಕಿ ಇದ್ದರು.


