
ಕಳಸ ಲೈವ್ ವರದಿ
ಕಳೆದ ಐದು ದಿನಗಳ ಹಿಂದೆ ಕಳಸದ ಎಡದಾಳು ಬೋವಿಪಾಲ್ ನಲ್ಲಿ ಕಳ್ಳತನ ಮಾಡಿದ್ದ ಕಳ್ಳರನ್ನು ಹಿಡಿದು ಬಂಧಿಸುವಲ್ಲಿ ಕಳಸ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡಿದ್ದ ಆರೋಪಿಗಳು ಕಿರಣ್ ಕೋಟೆಹೊಳೆ, ರವಿ ಗಣಪತಿಕಟ್ಟೆ, ನಿತೇಶ್ ಮೇಲಂಗಡಿ ಎಂದು ಗುರುತಿಸಲಾಗಿದೆ.
ಬೋವಿಪಾಲ್ನ ಸಾಬಿತ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನುಗ್ಗಿದ್ದ ಕಳ್ಳರು ಗ್ರಾಡ್ರೇಜ್ ನಲ್ಲಿದ್ದ 40 ಸಾವಿರ ಮೌಲ್ಯದ ಚಿನ್ನ, 5500 ರೂ ಮೌಲ್ಯದ ಬೆಳ್ಳಿ, 17 ಸಾವಿರ ಮೌಲ್ಯದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದರು.ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಜನವರಿ 24 ರಂದು ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಸ್.ಪಿ. ಡಾ||ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಕೃಷ್ಣಮೂರ್ತಿಯವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬಾಲಾಜಿ ಸಿಂಗ್,ಕುದುರೆಮುಖ ಪೊಲೀಸ್ ವೃತ್ತ ನಿರೀಕ್ಷಕ ಸೋಮೇಗೌಡರವರ ನೇತ್ರತ್ವದಲ್ಲಿ ಕಳಸ ಪಿಎಸ್ಐ ಬಾಬು ಅಗೇರ, ಕುದುರೆಮುಖ ಪಿಎಸ್ಐ ಆದರ್ಶಕುಮಾರ್, ಕಳಸ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಪ್ರಮೋದ್, ಗಿರೀಶ್, ವಿಶ್ವನಾಥ್ ಪಾಳೆಗಾರ್, ಸಿದ್ದಪ್ಪ, ಕರಂಡಿ, ಶಿವಕುಮಾರ್, ಸುನೀಲ್ ವೈ, ಕಾಶಿನಾಥ್ ಇವರ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿ ಕಳ್ಳರನ್ನು ಮಾಲು ಸಹಿತ ಹಿಡಿಯುವ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಒಂದು ಜೊತೆ ಚಿನ್ನದ ಜುಮಕಿ ಹಾಗೂ ಮಾಟಿ, ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ, 9 ಮೂಟೆ ಗೋಟು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.


