

ಕಳಸ ಲೈವ್ ವರದಿ
ಕಳಸದ ಪಿ.ವಿವೇಕಾನಂದ ಭಟ್ ಇವರ ಹಬ್ಬ ಹರಿದಿನಗಳ ಹಿರಿಮೆ ಗರಿಮೆ ಪುಸ್ತಕ ಲೋಕಾರ್ಪಣೆಗೊಂಡಿದೆ.
ಕಾಶಿಮಠದ ಯತಿಗಳಾದ ಶ್ರೀಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದು ಎರಡನೇ ಪುಸ್ತಕವಾಗಿದ್ದು, ಇವರ ಮೊದಲನೆ ಪುಸ್ತಕ ಭಕ್ತಿ ಮಾಲಾ ಎಂಬ ಪುಸ್ತಕ ಕಳಸದಲ್ಲಿ ಬಿಡುಗಡೆಗೊಂಡಿತ್ತು.
ವಿವೇಕಾನಂದ ಭಟ್ ಕಳಸ ಪದ್ಮನಾಭ ಭಟ್ ಮತ್ತು ಸಹೋದರ ಈ ಕುಟುಂಬದಲ್ಲಿ ಜನಿಸಿದ್ದಾರೆ.ದಯಾನಂದ ಭಟ್ ರಾಧಬಾಯಿ ಇವರ ಪುತ್ರರಾಗಿದ್ದಾರೆ.
ಹಬ್ಬ ಹರಿದಿನಗಳ ಹಿರಿಮೆ ಗರಿಮೆ ಈ ಪುಸ್ತಕ ಕಳಸ ಜಾತ್ರೆ ಸಂದರ್ಭದಲ್ಲಿ ಕೊಂಡುಕೊಳ್ಳಲು ಅವಕಾಶವಿರುತ್ತದೆ.




