ಕಳಸ ಲೈವ್ ವರದಿ
ಕಳಸ ತಾಲ್ಲೂಕು ಬಾಳೆಹೊಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಹಂಚಿನ ಮೇಲೆ ಕಳೆದ ಮಳೆಗಾಲದಲ್ಲಿ ಬಿದ್ದ ಮರವನ್ನು ಇನ್ನೂ ತೆರವು ಮಾಡಲಿಲ್ಲ.
ಮಳೆಗಾಲದಲ್ಲಿ ಬೀಸಿದ ಗಾಳಿಗೆ ಮರವೊಂದು ಬಿದ್ದು ಆಸ್ಪತ್ರೆಯ ಮೇಲೆ ಹಂಚುಗಳು ಒಡೆದುಹೋಗಿ, ಕಟ್ಟಡಕ್ಕೆ ಹಾನಿಯಾಗಿತ್ತು. ಮರ ಬಿದ್ದು ಸುಮಾರು 4 ತಿಂಗಳು ಕಳೆದಿದ್ದರೂ ಕೂಡ, ಆರೋಗ್ಯ ಇಲಾಖೆಯವರು ಹಲವಾರು ಬಾರಿ ಮನವಿ ಮಾಡಿದ್ದರೂ ಕೂಡ, ಈವರೆಗೆ ಮರವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಲು ಮುಂದೆ ಬಂದಿಲ್ಲ.
ಕೂಡಲೇ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




