
ಕಳಸ ಲೈವ್ ವರದಿ
ಕಳಸ ಸವಿತಾ ಭಂಡಾರಿ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು.
ಸಮಾಜದ ಬಾಂಧವರು ಮಹರ್ಷಿ ಜಯಂತೋತ್ಸವವನ್ನು ಆಚರಿಸಿ ನಂತರ ಕಲಶೇಶ್ವರ ದೇವಸ್ಥಾನಕ್ಕೆ ತೆರಳಿ ಅಕ್ಕಿ, ತರಕಾರಿ ಇನ್ನಿತರೆ ದಿನಸಿ ಸಾಮಾನುಗಳನ್ನು ಹೊರೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ, ಗೌರವಾಧ್ಯಕ್ಷ ಕೃಷ್ಣ ಭಂಡಾರಿ, ಕಾರ್ಯದರ್ಶಿ ರಾಘವೇಂದ್ರ ಭಂಡಾರಿ, ಜಗದೀಶ್ ಭಂಡಾರಿ, ಯಶಸ್ವಿನಿ ಮಹಿಳಾ ಭಂಡಾರಿ ಸಂಘದ ಅಧ್ಯಕ್ಷೆ ವನಜ ಭಂಡಾರಿ ಹಾಗೂ ಭಂಡಾರಿ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.




