
ಕಳಸ ಲೈವ್ ವರದಿ
ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ನೆಲ್ಲಿಬೀಡು ಸಮೀಪ ಹೊಂಡ-ಗುಂಡಿಯಿಂದ ಕೂಡಿದ್ದ ರಸ್ತೆಯಿಂದ ಬೇಸೆತ್ತು ಡ್ರೈವರುಗಳು ಮಣ್ಣು ಹಾಕಿ ಮುಚ್ಚಿದ್ದಾರೆ.
ಈ ಪ್ರದೇಶದಲ್ಲಿ ಸಾಕಷ್ಟು ದೊಡ್ಡ ಗಾತ್ರದ ಗುಂಡಿಗಳಿದ್ದು, ವಾಹನ ಸಂಚಾರರು ತೀರ ತೊಂದರೆ ಅನುಭವಿಸುತ್ತಿದ್ದರು.ಅಂಬ್ಯುಲೆನ್ಸ್, ಲಾರಿ ಚಾಲಕರು ಅಂತೂ ಈ ಗುಂಡಿ ಸಮಸ್ಯೆಯಿಂದ ಬೇಸೆತ್ತು ಹೋಗಿದ್ದರು.ಇದರ ಸಮಸ್ಯೆಯ ತೀವ್ರತೆಯನ್ನು ಅರಿತ ಡ್ರೈವರುಗಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖಾ ಇಂಜಿನೀಯರ್ ಸತೀಶ್ ಕಳಸ ಲೈವ್ ಜೊತೆ ಮಾತನಾಡಿ ಕಳಸ-ಎಸ್.ಕೆ ಬಾರ್ಡ್ರ್ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಿಗೆ ರಸ್ತೆ ದುರಸ್ಥಿಗಾಗಿ 5 ಕೋಟಿ ರೂ ಬಿಡುಗಡೆಯಾಗಿದೆ.ಇದರಲ್ಲಿ ನೆಲ್ಲಿಬೀಡು ಸಮೀಪದ ರಸ್ತೆಯ ಕಾಮಗಾರಿಯು ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡ್ರೈವರುಗಳಾದ ಶಶಿ, ಅಶ್ರಫ್, ಪ್ರಭಾಕರ ಇತರರು ಇದ್ದರು.